Letters

Letters 41 – Travelogue and Answers to Wordly Problems

೪೧. ಪ್ರತ್ಯೇಕ ವಿಷಯಕ್ಕೂ ಒಂದು(ಅನುಕೂಲವೆಂಬ) ಕಾಲ ಆ ನಿಯತಿ ಈಶ್ವರನಿಂದಲೇ ನಿಶ್ಚಯಿಸಲ್ಪಟ್ಟಿರುತ್ತದೆ. ತಾನೇತಾನಾಗಿ ಆ ವೇಳೆಗೆ ಎಲ್ಲವೂ ವ್ಯವಸ್ಥಿತವಾಗಿ ಕೂಡಿ ಬರುತ್ತದೆ.

(ಇಸವಿ ಸನ ೧೯೪೬ರಲ್ಲಿ ದಿನಕರ ಬುವಾ ರಾಮದಾಸಿ, ಸಜ್ಜನಗಡದವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||

ಮಂಗಳವಾರ, ಮಾಘ ವ| ೭|೧೮೬೭
೨೦-೨-೧೯೪೬
ಮಂಗಳೂರು
ಚಿ.ದಿನಕರನಿಗೆ ಆಶೀರ್ವಾದ,
ಒಟ್ಟಿನ ಮೇಲೆ ವಿಶೇಷವೆಂದರೆ, ಶ್ರೀಗಡದಿಂದ ಕಳುಹಿಸಿದ ಎರಡು ಪಾರ್ಸಲ ಸುಖರೂಪ ಚಿಕ್ಕಮಗಳೂರ ಮಾರ್ಗವಾಗಿ ಬಂದು ಮುಟ್ಟಿತು. ಅಲ್ಲಿಯ ಎಲ್ಲ ಸಮಾಚಾರ ಅವರ ಮುಖೇನ ತಿಳಿಯಿತು. ಅದರಲ್ಲಿ ಒಂದು ಪಾರ್ಸಲ(ಚಿ.ವಿಠ್ಠಲ) ಸದ್ಯದಲ್ಲೇ ಅಲ್ಲಿಗೆ ಮುಟ್ಟುತ್ತಾನೆ. ಎರಡನೆಯದು(ಚಿ.ಅಗಾಶೆ) ೮-೧೦ ದಿನಗಳಲ್ಲಿ ಅಲ್ಲಿಗೆ ಬರಲು ಹೊರಡುತ್ತಾನೆ.
ಸದ್ಯ ಅಲ್ಲಿಂದ ಯಾರೂ ಇಲ್ಲಿಗೆ ಬರಬಾರದು. ನಾನೇ ಶಕ್ಯವಾದಲ್ಲಿ ಅಲ್ಲಿಗೆ ವೈಶಾಖದಲ್ಲಿ ಶ್ರೀಸದ್ಗುರು ಚರಣದರ್ಶನಕ್ಕೆ ಬರುವೆನು.

‘ಬಲೀಯಸಿ ಕೇವಲಮೀಶ್ವರೇಚ್ಛಾ’, ಹೇಗೆ ಎಲ್ಲಾ ಕೂಡಿಬರುತ್ತದೆ ಎಂದು ನೋಡಬೇಕು. ನಮ್ಮ ಕಡೆಯಿಂದ ನಾವು ಸದಿಚ್ಛೆ ಇಡಬೇಕು, ನಂತರ ಅದನ್ನು ‘ಭಗವಂತ ತನ್ನ ದಯಾಳುತನದಿಂದ ಪೂರ್ಣ ಮಾಡುವನು’. ಒಂದಾನುವೇಳೆ ನನ್ನ ಬರುವಿಕೆ ಆಗದೇ ಹೋದರೂ ಅದರಲ್ಲಿ ಯಾವುದೋ ಪರಮಾತ್ಮನ ಸದ್ಹೇತುವೇ ಇರುತ್ತದೆ. ಗುಪ್ತವಾಗಿರುವ ಆ ಹೇತು ತನ್ನ ಮಹತ್ವದಿಂದ (ಮುಂದೆ ಯಾವಾಗಾದರೂ ಆಗಲಿರುವ ನನ್ನ ಆಗಮನಕಾಲದ ದರ್ಶನದಿಂದ) ಪ್ರಕಟವಾಗುತ್ತದೆ.

‘ಅಧಿಕಸ್ಯಾಧಿಕಂ ಫಲಮ್|’ ಆನಂದದ್ದೇ ಸಮಾಚಾರ.
ಪ್ರತ್ಯೇಕ ವಿಷಯದಲ್ಲೂ ಒಂದು(ಅನುಕೂಲವೆಂಬ) ಕಾಲ ಆ ನಿಯತಿ ಈಶ್ವರನಿಂದಲೇ ನಿಶ್ಚಯಿಸಲ್ಪಟ್ಟಿರುತ್ತದೆ. ತಾನೇತಾನಾಗಿ ಆ ವೇಳೆ ಎಲ್ಲವೂ ವ್ಯವಸ್ಥಿತವಾಗಿ ಕೂಡಿ ಬರುತ್ತದೆ. ಅಲ್ಲಿಯವರೆಗೆ ‘ಪ್ರಯತ್ನ ಮಾಡಿದರೂ ಕೈಗೂಡುವದಿಲ್ಲ’ ಎಂಬಂತಿರುತ್ತದೆ. ಇರಲಿ.

ನಾವೆಲ್ಲ ಸಮರ್ಥರ ಮೇಲೆಯೇ ವಿಶ್ವಾಸವಿಟ್ಟಿದ್ದೇವೆ. ನಮ್ಮಲ್ಲೇನಾದರೂ ನ್ಯೂನ್ಯತೆಯಿದ್ದರೆ ಅದನ್ನು ತುಂಬುವದೂ ಅವರ ಕಡೆಗೇ ಇದೆ. ‘ಸಮರ್ಥ ನಮ್ಮನ್ನು ಸಮರ್ಥ ಮಾಡಬೇಕು|’
ವೈಶಾಖದ ವರೆಗೂ ಇಲ್ಲಿಗೆ ಬರುವ ಗಡಿಬಿಡಿ ಯಾರೂ ಮಾಡಬಾರದು. ಮುಂದೆ ನೋಡೋಣ. ‘ವಿವೇಕದಲ್ಲಿ ಸಿಗಲಾರದು ಎಂಬಂತದು ಯಾವುದೂ ಇಲ್ಲ| ಏಕಾಂತದಲ್ಲಿನ ವಿವೇಕ ವಿಚಾರ| ಕರೆದೊಯ್ಯದೇ ಬಿಡುವದು||
ನೀವು ನಾವು ಅಖಂಡ ಒಂದೇ ಸ್ಥಳದಲ್ಲಿದ್ದೇವೆ|
ನಿರರ್ಥಕ ಮೃಗಜಲದಲ್ಲಿ ಮುಳುಗಬಾರದು||

ನನ್ನನ್ನು ಸಿಗಲು ಆತುರರಾದವರಿಗೆ ಸಮರ್ಥರ ಮುಖದಿಂದ ಬಂದ ಇದೇ ನನ್ನ ಉತ್ತರವನ್ನು ಹೇಳಿ. ನಿಮ್ಮೆಲ್ಲರ ಮೇಲೆ ಶ್ರೀಸಮರ್ಥರ ಸಂಪೂರ್ಣ ಕೃಪೆಯಾಗಲಿ.

ಶ್ರೀಧರ

home-last-sec-img