Literature

ಜೀವನ-ಪಥದಲಿ ಪತಿತರಾಗದಂತೆ ಧರ್ಮದ ಆಧಾರವಿರಲಿ!

ಈ ನರದೇಹವು ಎಷ್ಟೇ ಒಳ್ಳೆಯದಾಗಿ ಕಂಡರೂ ಈ ದೇಹದ ವ್ಯಾಪಾರಗಳನ್ನು ಸರಿಯಾಗಿ ಪರಿಶೀಲನೆ ಮಾಡಿದಾಗ, ಇಲ್ಲವೇ ನಮಗೆ ಬಂದ ಅನುಭವಗಳನ್ನೇ ಕಣ್ಣಿಟ್ಟು ನೋಡಿದಾಗ, ಇದು, ಈ ದೇಹ ಒಂದು ಬಂಧನವೇ ಎಂದು ಮನದಟ್ಟಾಗುವದು. ದೇಹ ನರಕಸದೃಶವೆಂದೂ ಅನಿಸಬಹುದು.

ಆದರೆ, ಜೀವಿಗಳು ಅಜ್ಞಾನದಿಂದ ಭ್ರಮೆಯಲ್ಲಿರುವಾಗ ವಿಷಯಸುಖವೇ ಜೀವನದ ಆಧಾರವೆನಿಸುತ್ತದೆ. ದೇಹವೇ ಸುಖದ ಮೂಲವೆಂದೆನಿಸುತ್ತದೆ. ವಿವೇಕವು ಅರಳಿದಂತೆಲ್ಲ ಈ ಸುಖದ ಸೆಳೆತವು ಕಡಿಮೆಯಾಗುತ್ತ ಹೋಗುವದು ಸ್ವಾಭಾವಿಕ.
ವಿವೇಕದ ಸೆಲೆ ಪುಟಿಯುವ ಮುನ್ನವೇ ಪತಿತರಾಗದಿರಲು ಮನುಷ್ಯ ಜೀವನದಲ್ಲಿ ಯಾವ ಆಧಾರದಿಂದ ಬದುಕಬೇಕು? ಅದಕ್ಕೆ ಉತ್ತರ : ಧರ್ಮದ ಆಧಾರದಿಂದ ಇರಬೇಕು!

ಮನುಷ್ಯನ ಹೃದಯದಲ್ಲಿ ವಿವೇಕ ಎಚ್ಚತ್ತು ಅದರ ಕಾರ್ಯ ಪೂರ್ಣತೆ ಹೊಂದುವವರೆಗೂ ಧರ್ಮಪ್ರವಚನದ ಶ್ರವಣ, ಮನನದ ಅವಶ್ಯಕತೆ ಇದೆ. ನಮ್ಮ ಗುರಿ ಧರ್ಮದ ಯಥಾರ್ಥ ಸ್ವರೂಪ ಗ್ರಹಣ, ನಮ್ಮ ಗುರಿ ಪರಮಾತ್ಮ, ನಮ್ಮ ಗುರಿ ನಿಜ ಸುಖ!
ಈ ಗುರಿ ಎಲ್ಲಿಂದ ಅರಿಯಬಹುದು?

ಯಾರು ಅದ್ವೇಷ್ಟರಾಗಿರುವರೋ ಅವರಿಂದ; ಯಾರಲ್ಲಿ ವಿಷಯ-ವಿಚಾರ ಲೇಶಮಾತ್ರವೂ ಇಲ್ಲವೋ ಅವರಿಂದ; ಯಾರ ಹೃದಯಕ್ಕೆ ರಾಗ-

ದ್ವೇಷಗಳ ಗಾಳಿಯೂ ಸೋಂಕುವದಿಲ್ಲವೋ ಅವರಿಂದ!
ಅವರ ಹೃದಯದಿಂದ ಸ್ಫುರಿಸುವ ಮಾತಿನಿಂದ; ಅವರ ಅನುಭವದಿಂದ!
ಗುರಿತಪ್ಪದ ಮಾರ್ಗವು ಸನಾತನ ಧರ್ಮದಲ್ಲಿದೆ. ಸತ್ಯಕ್ಕೆ ನೇರ ಮಾರ್ಗ ಸನಾತನ ಧರ್ಮದ ದೃಷ್ಟಿಯಲ್ಲಿದೆ.
ಈ ಧರ್ಮವನ್ನು ಆಶ್ರಯಿಸಿ ಪ್ರತಿನಿಮಿಷವೂ ಪರಮಾತ್ಮನ ಧ್ಯಾನದಲ್ಲಿ ನಿರತರಾಗಿರುವದು ನಮ್ಮ ಜೀವನದ ರಹಸ್ಯ!

home-last-sec-img