Literature

ಶ್ರೀರಾಮನು ಸರ್ವಮಂಗಲದಾಯಿ

ಆಸ್ತಿಕ್ಯದ ಬಗ್ಗೆ ಶ್ರೀರಾಮನ ವಿವರವಾಗಿ ಕೇಳಿದ ಜಾಬಾಲಿಗಳು ಹೇಳುತ್ತಾರೆ.

ನ ನಾಸ್ತಿಕಾನಾಂ ವಚನಂ ಬ್ರವೀಮ್ಯಹಂ|
ನ ನಾಸ್ತಿಕೋಽಹಂ ನ ಚ ನಾಸ್ತಿ ಕಿಂಚನ||
ನಿವರ್ತನಾರ್ಥಂ ತವ ರಾಮ ಕಾರಣಾತ್|
ಪ್ರಸಾದನಾರ್ಥಂ ಚ ಮಯೈತದೀರಿತಮ್||

‘ರಾಮಾ! ನಾಸ್ತಿಕರ ಪಕ್ಷವನ್ನು ನಾನು ಮಂಡಿಸುವವನಲ್ಲ, ನಾಸ್ತಿಕನೂ ನಾನಲ್ಲ. ನಿನ್ನನ್ನು ಅಯೋಧ್ಯೆಗೆ ಹಿಂದಿರುಸುವದಕ್ಕಾಗಿ ಹೇಳಿದ ಈ ಮಾತು ನಿನ್ನ ಸುಖಕ್ಕಾಗಿಯೇ ಅಲ್ಲದೇ ಮತ್ತಾವ ಕಾರಣದಿಂದಲೂ ಹೇಳಿದ್ದಲ್ಲ.’
ಈ ಜಾಬಾಲಿಗಳ ವಚನದಿಂದ ಅವರ ಹೃದಯವು ಬಿಚ್ಚಿ ತೋರಿಸಲ್ಪಟ್ಟಿರುವದು. ಈ ಸಂವಾದದಿಂದ ಶ್ರೀರಾಮನ ಅಂತರಂಗವನ್ನೂ ನಾವು ನೋಡಬಹುದು.

ಕಷ್ಟಕರ ಜೀವನದಲ್ಲಿ ಹೋರಾಡುತ್ತಿರುವಾಗ, ಧರ್ಮಪರನಾದ ಮನುಷ್ಯನಿಗೆ ಇಷ್ಟ-ಬಂಧುಗಳ ಒತ್ತಾಯ ಮತ್ತು ಸಾಮಾನ್ಯ ಜನರ ನಾಸ್ತಿಕ ಯುಕ್ತಿವಾದ ಹೇಗೆ ತಪ್ಪುಮಾರ್ಗದಲ್ಲಿ ನಡೆಯಲು ಪ್ರಚೋದಿಸುವದು ಎಂದು ನಾವು ಅರಿಯತಕ್ಕ ವಿಷಯವಾಗಿದೆ. ಈ ವಿಷಯದಲ್ಲಿ ಶ್ರೀರಾಮನ ಧರ್ಮಪರತೆಯೇ ಸಾಧನಪಥದಲ್ಲಿ ಮೇಲ್ಪಂಕ್ತಿ!

‘ಲೋಕೇ ನ ಹಿ ಸ ವಿದ್ಯೇತ ಯೋ ನ ರಾಮ ಮನುವ್ರತಃ|’
ರಾಮನನ್ನು ಅನುಕರಿಸಿ, ಅನುಗಾಮಿಯಾಗಿ ಹೋಗದಿದ್ದವನು ಲೋಕದಲ್ಲೇ ಹುಟ್ಟಿಲ್ಲ!
ಭಾರತವರ್ಷ ರಾಮರಾಜ್ಯ! ಇಲ್ಲಿ ರಾಮನೇ ಏಕಚಕ್ರಾಧಿಪತಿ!
ಎಲ್ಲರಿಗೂ ಶ್ರೀರಾಮನು ಮಂಗಲದಾಯಿಯಾಗಲಿ!

||ಶ್ರೀರಾಮ ಜಯ ರಾಮ ಜಯ ಜಯ ರಾಮ||

home-last-sec-img