Memories

17. ಬಾರಕೂರಿನಲ್ಲಿ ವೇತಾಳ ಸ್ಥಂಭ ಓಲಾಡಿತು

(ನಿರೂಪಣೆ : ಶ್ರೀಧರಭಕ್ತ ಶ್ರೀ ನಾರಾಯಣ ಕರಮರಕರ, ಸಜ್ಜನಗಡ)

ದಾಸನವಮಿ ೧೮೯೫, ೨೩|೦೨|೧೯೬೩

ಸ್ವಾಮಿಗಳು ಮಂಗಳೂರಿನಲ್ಲಿದ್ದಾಗ, ಅಲ್ಲಿಂದ ಹತ್ತಿರವಿರುವ ಬಾರಕೂರು ಎಂಬ ಊರಿನ ಜನರು ಭೂತ ಪಿಶಾಚಿಯ ತೊಂದರೆಯಿಂದ ತ್ರಸ್ಥರಾಗಿ ತಮ್ಮ ಗೋಳು ಸ್ವಾಮಿಗಳಲ್ಲಿ ತೋಡಿಕೊಳ್ಳಲು ಬಂದಿದ್ದರು. ಅವರ ಗೋಳು ಕೇಳಿದ ಸ್ವಾಮಿಗಳು, ಆ ಊರಿಗೆ ಹೋದರು ಮತ್ತು ಅಲ್ಲಿಯ ಎಲ್ಲ ಭೂತಭಾಧೆ ನಿವಾರಣೆ ಮಾಡಿ ಆ ಊರಿನಲ್ಲಿ ಸುಖ ಪ್ರಸ್ಥಾಪಿಸಿದರು. ಮತ್ತೆ ಇದೇ ರೀತಿ ತೊಂದರೆ ಜನರಿಗೆ ಆಗಬಾರದೆಂದು ಅಲ್ಲಿ ವೇತಾಳನ ಸ್ಥಾಪನೆ ಮಾಡಿದರು. ಅಂದರೆ, ಅತಿ ದೊಡ್ಡ ಸಿಮೆಂಟ ಕಾಂಕ್ರೀಟಿನ ೧೮ ಫುಟ ಎತ್ತರದ ಸ್ತಂಭವನ್ನು ಕಟ್ಟಿ, ಅದರಲ್ಲಿ ಶ್ರೀಸ್ವಾಮಿಗಳ ಕೈಯಿಂದ ವೇತಾಳನ ಆವಾಹನೆ ಮಾಡಿದರು. ವೇತಾಳನ ಸ್ಥಾಪನೆಯಾಗಿ ಪೂಜೆ ಮಾಡಿ ನಂತರ ಆರತಿ ಪ್ರಾರಂಭವಾಯಿತು. ಆ ವೇಳೆ, ಸ್ವಾಮಿಗಳು ಆ ಸ್ತಂಭಕ್ಕೆ ಹಸ್ತಸ್ಪರ್ಷನ ಮಾಡಿದ ಕೂಡಲೇ, ವೇತಾಳ ಪ್ರಸನ್ನನಾಗಿ, ಆ ೧೮ ಫುಟ ಎತ್ತರದ ಪ್ರಚಂಡ ಸ್ತಂಭ ಒಲಾಡಹತ್ತಿತು ಮತ್ತು ಆ ತೂಗಾಟ ಸುಮಾರು ಒಂದು ತಾಸಿನವರೆಗಂತೂ ನಡೆದಿತ್ತು. ಈ ಪ್ರಸಂಗ ನೋಡುವರಲ್ಲಿ ಕೆಲ ಚಿಕಿತ್ಸಕ ದೃಷ್ಟಿಯವರೂ ಇದ್ದರು. ಅವರು ಸ್ವಾಮಿಗಳಿಗೆ, ‘ಮಹಾರಾಜ! ಇದು ಹೇಗೆ ಸಾಧ್ಯ?’ ಎಂದು ಕೇಳಿದರು. ಆಗ ಸ್ವಾಮಿಗಳು ಸಹಜವಾಗಿಯೇ, ‘ಜಗತ್ತಿನಲ್ಲಿ ದೇವರಿದ್ದಾನೆ, ಅದಕ್ಕೆ ಇದು ಪ್ರಮಾಣವಾಗಿದೆ. ಅವನ ಇಚ್ಛೆಯಿಂದಲೇ ಈ ವೇತಾಳ ಸ್ತಂಭದ ತೂಗುವಿಕೆಯೂ ನಡೆಯಿತು’ ಎಂದು ಹೇಳಿದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಆಷಾಢ, ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img