Memories

27. ಪತಿತನು ನಾನು, ಪಾವನನಾದೆ ನಿನ್ನ ಕೃಪೆಯಿಂದಾ

(ನಿರೂಪಣೆ : ಶ್ರೀಧರಭಕ್ತ ಶ್ರೀ ಗೋವಿಂದಸ್ವಾಮಿ ಆಫಳೇ)

ಶ್ರೀಸಮರ್ಥ ರಾಮದಾಸಸ್ವಾಮಿ ಮಹಾರಾಜರ ಮೂರ್ನೂರನೇ ವರ್ಷೋತ್ಸವ ಎಲ್ಲ ಕಡೆಗೂ ಆಚರಿಸಲಾಯಿತು. ಅದರಂತೆ, ದಾದರ, ಮುಂಬಾಯಿಯಲ್ಲೂ ಉತ್ಸವ ನೆರವೇರಿತು. ಆಗ ಮಹಾರಾಷ್ಟ್ರದಲ್ಲಿಯಾದರೂ ಸಮರ್ಥ ಉತ್ಸವ ಅಂದರೆ, ಶ್ರೀರಾಮದಾಸಸ್ವಾಮಿಗಳ ಹಿಂದೇನೇ, ಗೋವಿಂದಸ್ವಾಮಿಯ ಹೆಸರು ನೆನಪಾಗುತ್ತದೆ ಮತ್ತು ಅದರಂತೆ ನನ್ನ ಕೀರ್ತನೆ ನಿರ್ಧಾರವಾಯಿತು. ಆದರೆ ನನ್ನ ಗ್ರಹಗತಿ ವಕ್ರವಾಗಿ ತಿರುಗಿಕೊಂಡಿತು. ಕೆಲವು ಜನರು ಏನೋ ದೋಷ ತೆಗೆದು ಅದನ್ನು ಸ್ಥಗಿತ ಮಾಡುವ ಪ್ರಯತ್ನ ಮಾಡಿದರು. ಈ ವಾರ್ತೆ ಸ್ವಾಮಿಗಳ ಕಿವಿಗೆ ಬಿತ್ತು. ‘ಗೋವಿಂದಸ್ವಾಮಿಯದೇ ಕೀರ್ತನೆ ಶ್ರೀಸಮರ್ಥ ಸೇವೆಯಲ್ಲಿ ಆಗಲಿ; ನಾನು ಕೀರ್ತನೆಗೆ ಬಂದು ಕುಳಿತುಕೊಳ್ಳುತ್ತೇನೆ’ ಎಂದು ಸ್ವಾಮಿಗಳು ಹೇಳಿದರು ಮತ್ತು ಅದರಂತೆ ಕೀರ್ತನೆಗೆ ಬಂದು ಕುಳಿತರು. ಮುಂದೆ ಶ್ರೀಸಮರ್ಥರ ಚರಣ ಪಾದುಕೆ ಮತ್ತು ಅದರ ಹತ್ತಿರ ಆ ಪರಂಪರೆಯನ್ನು ಸಮೃದ್ಧವಾಗಿ ಮುಂದುವರಿಸುತ್ತಿರುವ ಶ್ರೀ ಶ್ರೀಧರಸ್ವಾಮಿ. ಎರಡು ಮಹಾನ ವಿಭೂತಿಗಳು. ದೃಷ್ಟ ಮತ್ತು ಅದೃಷ್ಟ! ನನ್ನ ಕೀರ್ತನೆ ತುಂಬಾ ಜನ ಮನ ರಂಜಿತವಾಯಿತು. ಎಲ್ಲಾ ಸ್ವಾಮಿಗಳದೇ ಕೃಪೆ! ಕೀರ್ತನೆ ಮುಗಿದ ಮೇಲೆ ಸ್ವಾಮಿಗಳ ಪಾದಗಳಿಗೆ ನತಮಸ್ತಕನಾದೆ. ಅಷ್ಟು ಪ್ರಚಂಡ ಜನಸಮೂಹದ ಮಧ್ಯೆಯೂ, ಆ ಪಾದಗಳ ಮೇಲೆ ಮಸ್ತಕವಿಟ್ಟಂತೆಯೇ ನನಗೆ ಸಂಪೂರ್ಣ ಸುಂದರ ಏಕಾಂತ ಲಭಿಸಿತು ಮತ್ತು ಸ್ವಾಮಿಗಳ ಮಧುರ ವಾಣಿ, ‘ಇಂದು ಮುಚ್ಚು ಮುಂಜಾನೆ ಎರಡೂವರೆ ಮೂರು ಗಂಟೆಗೆ ಸ್ನಾನಮಾಡಿ ಮಾಮಾ ಕಾಣೆಯವರ ಮನೆಗೆ ಬಾ’ ಎಂದು ನನ್ನ ಕಿವಿಗಳ ಮೇಲೆ ಬೀಳಲು ನಾನು ಆಶ್ಚರ್ಯಚಕಿತನಾದೆ. ಸ್ವಾಮಿಗಳ ಸಂದೇಶ ಲಕ್ಷದಲ್ಲಿಟ್ಟುಕೊಂಡೆ. ರಾತ್ರಿಯ ಹನ್ನೆರಡೂವರೆ ಈಗಾಗಲೇ ಆಗಿತ್ತು. ಉಳಿದದ್ದು ಕೇವಲ ಎರಡು ತಾಸು! ನಾನು ಸ್ನಾನ ಮಾಡಿ, ನಿತ್ಯಪಾಠ ಮುಗಿಸಿದೆ ಮತ್ತು ಎರಡು ಗಂಟೆ ಸುಮಾರಿಗೆ ಅಲ್ಲಿಗೆ ಹೋದೆ. ಆ ಸಮಯದಲ್ಲಿ ನೂರಾರು ಸ್ತ್ರೀ ಪುರುಷರು ದರ್ಶನಕ್ಕಾಗಿ ದಾರಿಕಾಯುತ್ತಾ ಕುಳಿತದ್ದು ನೋಡಿದೆ. ನಾನು ಒಳಗಡೆ ಹೋದೆ ಮತ್ತು ಸ್ವಾಮಿಗಳ ಪಾದ ಮುಟ್ಟಿ, ಸಾಷ್ಟಾಂಗ ವಂದನೆ ಮಾಡಿದೆ. ಆಗ ಸ್ವಾಮಿಗಳು ನನ್ನ ಪದರಿಗೆ ಪಸಾಯದಾನ (ಪ್ರಸಾದ) ಕೊಡುತ್ತ, ‘ಯಾರೊಡನೆಯೂ ಏನೂ ಮಾತನಾಡದೇ ಮನೆಗೆ ಹೋಗು!’ ಎಂದು ಅಪ್ಪಣೆ ಮಾಡಿದರು. ಅದರಂತೆ ನಾನು ಮನೆಗೆ ಬಂದೆ ಮತ್ತು ಆ ಚೀಲ ಬಿಚ್ಚಿ ನೋಡಿದೆ.

ಆ ಚೀಲದಲ್ಲಿ ಏನೇನೆಲ್ಲಾ ಇತ್ತು? ಅದರ ಬದಲು ಏನೇನಿಲ್ಲಾಗಿತ್ತು ಎಂದೇ ಕೇಳಬೇಕೇನೋ! ಸೇಬು, ಬಾಳೆಹಣ್ಣು ಮೊದಲಾದ ಹಣ್ಣು – ಹಂಪಲಗಳು, ರುದ್ರಾಕ್ಷ ಮತ್ತು ಹೂಗಳ ಮಾಲೆಗಳು.ಎಲ್ಲವೂ ಇದ್ದವು. ಶ್ರೀಫಲ, ಸಿಪ್ಪೆ ತೆಗೆಯದ ತೆಂಗಿನಕಾಯಿ, ಒಂದು ಲಕೋಟೆಯಲ್ಲಿ ಸ್ವಾಮಿಗಳ ಹಸ್ತಾಕ್ಷರದ ಸುಂದರ ಆಶೀರ್ವಾದ ಪತ್ರವಿತ್ತು ಮತ್ತು ಬಹಳಿಷ್ಟು ಹಣದ ನೋಟುಗಳೂ ಇದ್ದವು. ಲಕ್ಷ್ಮಿ ಮತ್ತು ಸರಸ್ವತಿ, ಇಬ್ಬರನ್ನೂ ಆ ಮಹಾಪುರುಷರು ನನ್ನ ಚೀಲದಲ್ಲಿ ಹಾಕಿದರು.

ನಾನು ಪತಿತನು ಆದರೆ ಶ್ರೀ ಶ್ರೀಧರ ಸ್ವಾಮಿಗಳು ನನ್ನನ್ನು ಪಾವನ ಗೋವಿಂದಸ್ವಾಮಿ ಮಾಡಿದರು. ಇಂದಿಗೂ ಆ ಪತ್ರ ಅತ್ಯಂತ ಮಹತ್ವದ್ದೆಂದು ಕಾಳಜಿಯಿಂದ ಇಟ್ಟುಕೊಂಡಿದ್ದೇನೆ. ಹಣದ ನೋಟೂ ದೊಡ್ಡ ಮೊತ್ತದ ೨೦೧ ರೂಪಾಯಿ. ಮುಂದೆ ನನಗೆ ಪುತ್ರಪ್ರಾಪ್ತಿಯೂ ಆಯಿತು. ಜೀವನದಲ್ಲಿ ಆನಂದವೇ ತುಳುಕಾಡಿತು. ಸ್ವಾಮಿಗಳ ಕೃಪೆಯಾದ ಅಂದಿನಿಂದ ನಾನು ಪಾವನನಾದೆ. ಅದಕ್ಕಾಗಿಯೇ ಸ್ವಾಮಿಗಳ ಸ್ಮರಣೆ ಒಂದು ಪುಣ್ಯಸ್ಮರಣೆಯೇ ಆಗಿದೆ!

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಅಶ್ವಿನ ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img