(ನಿರೂಪಣೆ : ಅನಾಮಧೇಯ ಶ್ರೀಧರಭಕ್ತ)
ಮಂಗಳೂರಿನ ಚಾತುರ್ಮಾಸದ ಸಮಯ ಸ್ವಾಮಿಗಳ ವಾಸ್ತವ್ಯ ಶ್ರೀಧರ ಶೆಣೈಯವರ ಬಂಗಲೆಯಲ್ಲಿ ಇತ್ತು.
ಆ ದಿನ ….
ಚಾತುರ್ಮಾಸದ ಮೊದಲನೆಯ ಏಕಾದಶಿಯಾಗಿತ್ತು. ಸ್ವಾಮಿಗಳು ಏಕಾದಶಿಯಂದು ನಿರ್ಜಲ ವೃತ ಪಾಲಿಸಿದರು. ಏಕಾದಶಿ ಎರಡು ದಿನಗಳಿದ್ದರೆ, ಸ್ಮಾರ್ತ ಮತ್ತು ಭಾಗವತ ಎಂಬ ಎರಡೂ ಏಕಾದಶಿ ದಿನಗಳಲ್ಲಿ ಸ್ವಾಮಿಗಳು ನಿರ್ಜಲರಾಗಿರುತ್ತಿದ್ದರು.
ದ್ವಾದಶಿಯ ದಿನ ಬೆಳಿಗ್ಗೆ ….
ಸ್ವಾಮಿಗಳು ಬಂಗಲೆಯಲ್ಲಿಯ ಗುಹೆಯಲ್ಲಿ ಧ್ಯಾನಸ್ಥರಾಗಿ ಕುಳಿತಿದ್ದರು. ಸ್ವಾಮಿಗಳಿಗೆ ಹಾಲು ಕೊಡಬೇಕೆಂದು ಕೇಸರಯುಕ್ತ ಆಕಳ ಹಾಲು, ದತ್ತಾಬುವಾರು ಸ್ವಾಮಿಗಳ ಗುಹೆಯೊಳಗೆ ಇಟ್ಟು ಬಂದರು. ಆಗ ಸ್ವಾಮಿ ಮಹಾರಾಜರು ಧ್ಯಾನಸ್ಥರಾಗಿದ್ದರು. ಸ್ವಲ್ಪ ಸಮಯದ ನಂತರ ಗುಹೆಯಲ್ಲಿಟ್ಟ ಹಾಲು ಸ್ವಾಮಿಗಳು ತೆಗೆದುಕೊಂಡರೋ ಇಲ್ಲವೋ ಎಂದು ನೋಡಲು ದತ್ತಾಬುವಾರು ಅಲ್ಲಿ ಬಂದು ನೋಡಲು, ಬಂಗಲೆಯಲ್ಲಿನ ನಾಯಿ, ಗುಹೆಯೊಳಗೆ ಹೋಗಿ ಹಾಲು ಕುಡಿಯುತ್ತಿದ್ದದ್ದು ಕಾಣಿಸಿತು ಮತ್ತು ಸ್ವಾಮಿಗಳು, ನಿರ್ವಿಕಾರ ಮತ್ತು ಸಮಾಧಾನ ಸ್ಥಿತಿಯಲ್ಲಿ ಅದನ್ನು ನೋಡುತ್ತಿದ್ದರು. ಸ್ವಾಮಿಗಳು, ಆ ನಾಯಿಯನ್ನೇಕೆ ಬೆದರಿಸಿ ಓಡಿಸಲಿಲ್ಲವೆಂದು ಅವರಿಗೆ ಅನಿಸಿರಬಹುದು. ಆದರೆ, ಸ್ವಾಮಿಗಳು, ‘ಅರೇ! ಈ ಚತುಷ್ಪಾದ ಭಗವಂತ ಹಾಲು ಕುಡಿಯುತ್ತಿದ್ದಾನೆ. ಭಗವಂತ ಸರ್ವವ್ಯಾಪಿಯಾಗಿದ್ದಾನೆ. ಈ ಭಗವಂತನಿಗೆ ತೃಪ್ತಿಯಾಯಿತೆಂದರೆ ನನ್ನದೂ ಹೊಟ್ಟೆ ತುಂಬಿದಂತೆಯೇ ಆಯಿತು’ ಹೀಗೆಂದು ಹೇಳಿದರು. ನಿಜವಾಗಿಯೂ ಆ ನಾಯಿ ಹಾಲು ಕುಡಿದು ಹೊರಟು ಹೋದ ಮೇಲೆ ಸ್ವಾಮಿಗಳಿಗೆ, ಹೊಟ್ಟೆ ತುಂಬಿದ ಮೇಲೆ ಬರುವ ಸಹಜ ಸಮಾಧಾನದ ತೇಗು ಬಂತು.
ಸ್ವಾಮಿಗಳು ಶಿಷ್ಯನಿಗೆ, ‘ಸಕಲ ಜೀವಿಗಳಲ್ಲಿ ಪರಮೇಶ್ವರನಿದ್ದಾನೆ’, ಎಂಬುದರ ಪ್ರಚೀತಿ ಮಾಡಿದ್ದಲ್ಲದೇ, ಗುರುಮಾಯಿ ಹಸಿದ ಹೊಟ್ಟೆಯಲ್ಲೇ ಇದ್ದಾರೆಂಬ ದುಃಖವೂ ತನ್ನ ಶಿಷ್ಯನಿಗೆ ಆಗದಂತೆ ನೋಡಿಕೊಂಡರು.
ಸ್ವರೂಪದ ಸಂಯೋಗಿ| ಸ್ವರೂಪದ ಯೋಗಿಯೇ ಆದನವ|
ಅವನೇ ಅರಿತಿರು ಮಹಾಯೋಗಿ| ಅವನೇ ಈಶ್ವರೀ ಪುರುಷನು|
|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|
(ಗತಕಾಲದ ‘ಶ್ರೀಧರ ಸಂದೇಶ’ ಮಾರ್ಗಶೀರ್ಷ, ೧೯೦೧ ಸನ ೧೯೭೯, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ