Memories

44. ಕರುಣಾಮಯಿ ನಮ್ಮ ಗುರುಮಾಯಿ

(ನಿರೂಪಣೆ : ಅನಾಮಧೇಯ ಶ್ರೀಧರಭಕ್ತ)

ಶಕೆ ೧೮೮೮ರ ಸ್ವಾಮಿಗಳ ಚಾತುರ್ಮಾಸ, ಮಧ್ಯಪ್ರದೇಶದಲ್ಲಿನ ಹೌಶಂಗಾಬಾದಿನಲ್ಲಿ ನರ್ಮದಾ ತೀರದಲ್ಲಾಯಿತು. ಮಾರ್ಗಶೀರ್ಷ ಹುಣ್ಣಿವೆಯ ಸಾಯಂಕಾಲ ಶ್ರೀದತ್ತಜನ್ಮದ ಸಮಯದಲ್ಲಿ ಸ್ವಾಮಿಗಳು ಏಕಾಂತದಿಂದ ಹೊರಗೆ ಬಂದರು. ಮಾರ್ಗಶೀರ್ಷ ವದ್ಯ ೨ರ ಮಧ್ಯಾಹ್ನದ ನಂತರ ಹೌಶಂಗಾಬಾದದಲ್ಲಿನ ಎಲ್ಲ ದೇವ ದೇವತೆಗಳ ದರ್ಶನಕ್ಕೆ ಸ್ವಾಮಿಗಳು ಹೊರಬಂದರು. ಬೇರೆ ಬೇರೆ ದೇವಸ್ಥಾನಗಳ ದರ್ಶನ ತೆಗೆದುಕೊಳ್ಳುತ್ತಾ, ಒಂದು ಗಲ್ಲಿಯಿಂದ ಹೋಗುತ್ತಿರುವಾಗ ಒಂದು ಹಳೆಯ ಮನೆಯಿಂದ, ‘ಅಹೋ! ಮಹಾತ್ಮರೇ! ಈ ಪಾಪಿಯು ತನ್ನ ಕರ್ಮ ಅನುಭೋಗಿಸುತ್ತಿದ್ದಾನೆ. ಅವನಿಗೆ ದರ್ಶನ ಕೊಡುವ ಕೃಪೆ ಮಾಡಿ’, ಎಂದು ದೊಡ್ಡ ಆರ್ತ ಧ್ವನಿಯ ಕೂಗು ಕೇಳಿಬಂತು. ಆ ಮನೆಗೆ ಹೋಗುವ ರಸ್ತೆಯನ್ನು ಚರಂಡಿ ಕೆಲಸಕ್ಕೆ ಅಗೆದಿದ್ದರು ಮತ್ತು ಮನೆಗೆ ಹೋಗುವ ಮಾರ್ಗವೂ ಅಸ್ವಚ್ಛವಾಗಿತ್ತು. ಆದರೆ, ಗುರುಮಾಯಿಯು, ಆ ಚರಂಡಿಯ ಮೇಲಿಂದ ಆ ಕಡೆ ಹಾರಿದರು ಮತ್ತು ಆ ಮನುಷ್ಯನ ಮಲಗಿದ್ದ ಮಂಚದ ಹತ್ತಿರ ಹೋದರು. ಆ ಕೋಣೆಯಲ್ಲಿ ಎಲ್ಲೆಲ್ಲಿ ಕಸ – ಹೊಲಸು ತುಂಬಿತ್ತು. ಸ್ವಾಮಿಗಳು ಆ ಮನುಷ್ಯನ ಬೆನ್ನು ತಟ್ಟುತ್ತ, ಅವನಿಗೆ ಸಾಂತ್ವನ ಮಾಡುತ್ತಿರುವಾಗ ಆತನು ದೊಡ್ಡ ದೊಡ್ಡದಾಗಿ ಅಳಹತ್ತಿದನು ಮತ್ತು ಸ್ವಾಮಿಗಳ ಪಾದದ ಮೇಲೆ ಇಟ್ಟ ತಲೆಯನ್ನು ಪೂರ್ಣ ಸಮಾಧಾನ ಆಗುವವರೆಗೆ ಅವನು ಎತ್ತಲಿಲ್ಲ. ಸ್ವಾಮಿಗಳು ಅವನಿಗೆ ಅವನು ಮಾತನಾಡುವ ಭಾಷೆಯಲ್ಲಿಯೇ ಉಪದೇಶ ಮಾಡಿದರು. ಅಲ್ಲಿ ಉಪಸ್ಥಿತರಿದ್ದ ಜನರೆಲ್ಲ ಸ್ವಾಮಿಗಳ ದೀನನ ಮೇಲಿನ ಕಾರುಣ್ಯಭಾವ ನೋಡಿ, ಗದ್ಗದರಾದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಫಾಲ್ಗುಣ, ೧೯೦೧, (ಇಸವಿ ಸನ ೧೯೭೯), ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img