Memories

9. ಗುರುಪ್ರಾರ್ಥನೆಯ ಫಲ ನಿಶ್ಚಿತ

(ನಿರೂಪಣೆ : ಶ್ರೀಧರಭಕ್ತ ಶ್ರೀ ವಿನಾಯಕ ಫಡಕೆ)

ಆ ದಿನ ನಮ್ಮ ಮನೆಯಲ್ಲಿ ನನ್ನ ಒಬ್ಬ ಮಿತ್ರನ ಲಗ್ನಪೂರ್ವ ಸ್ನೇಹಸಂಮಿಲನದ ಕಾರ್ಯಕ್ರಮ, ಮಧ್ಯಾಹ್ನ ನಾಲ್ಕು ಗಂಟೆಗೆ ಆಯೋಜಿಸಿದ್ದೆವು. ಆಗ, ಮಧ್ಯಾಹ್ನ ಮೂರೂವರೆಗೆ, ನನ್ನ ಹೆಂಡತಿಯ ತವರು ಮನೆಯ ಹತ್ತಿರದ ಬಂಧುವನ್ನು ಕೆ.ಇ.ಎಮ್ ರುಗ್ಣಾಲಯದಲ್ಲಿ ಸೇರಿಸಿದ್ದಾರೆಂದೂ, ಅವರ ಪ್ರಕೃತಿಯು ಅತ್ಯಂತ ಗಂಭೀರವಾಗಿದೆಯೆಂದೂ ಮತ್ತು ಅವರನ್ನು ಸಿಗಲು ತಕ್ಷಣ ರುಗ್ಣಾಲಯಕ್ಕೆ ಬರುವಂತೆಯೂ಼ ಸಮಾಚಾರ ಸಿಕ್ಕತು. ಈ ಸಮಾಚಾರ ತಿಳಿಯುತ್ತಿದದಂತೆಯೇ ನಮ್ಮ ಮನೆಯಲ್ಲಿ ಎಲ್ಲರೂ ಚಿಂತಾತುರರಾಗಿರಲು, ನಮ್ಮ ಮನೆಯಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಯಾರಿಗೂ ಲಕ್ಷಕೊಡಲು ಶಕ್ಯವಿಲ್ಲವಾಯಿತು. ತಕ್ಷಣ ರುಗ್ಣಾಲಯಕ್ಕೆ ಹೋಗುವದು ಅನಿವಾರ್ಯವಾಗಿತ್ತು. ಆಗ ನಾನು ಮತ್ತು ನನ್ನ ಪತ್ನಿ ಇಬ್ಬರೂ ಮನಸ್ಸಿನಲ್ಲಿಯೇ ಸ್ವಾಮಿಗಳಿಗೆ ನಮಸ್ಕಾರ ಮಾಡಿ, ನಮ್ಮ ಅತಿ ಹತ್ತಿರದ ಆಪ್ತನಿಗೆ ತಮ್ಮ ಕೃಪೆಯಿರಲಿ, ಅವನು ಗುಣರೂಪವಾಗಲೆಂದು ಸ್ವಾಮಿಗಳಲ್ಲಿ ಬೇಡಿಕೊಂಡು, ತಕ್ಷಣ ರಿಕ್ಷಾ ಮಾಡಿಕೊಂಡು ರುಗ್ಣಾಲಯಕ್ಕೆ ಹೋದೆವು. ಅದೇನಾಶ್ಚರ್ಯ! ನಮ್ಮನ್ನು ನೋಡಿದ ನರ್ಸು, ನನ್ನ ಆ ಆಪ್ತನ ಪ್ರಕೃತಿ ‘ಈಗ ಸುಧಾರಣೆಯಾಗುತ್ತಿದೆ’, ಎಂದು ಹೇಳಲು, ನಮಗಿಬ್ಬರಿಗೂ ಅತಿ ಆನಂದವಾಯಿತು. ಅಲ್ಲೇ ಆಗಲೇ ನಾವು ನಮ್ಮ ಸ್ವಾಮಿಗಳ ಕೃಪೆಯನ್ನು ಸ್ಮರಿಸಿ, ಮನಸ್ಸಿನಲ್ಲೇ ನಮಸ್ಕರಿಸಿದೆವು. ನಂತರ ಮನೆಗೆ ತಿರುಗಿ ಬಂದು ಆಯೋಜಿತ ಕಾರ್ಯಕ್ರಮವನ್ನು ಆನಂದದಿಂದ ನೆರವೇರಿಸಿದೆವು. ನಮ್ಮ ಆ ಆಪ್ತನ ಪ್ರಕೃತಿಯೂ ನಂತರ ಸಂಪೂರ್ಣ ಸುಧಾರಿಸಿ, ಈಗಲೂ ಆರೋಗ್ಯವಂತನಾಗಿ ಚೆನ್ನಾಗಿ ಇದ್ದಾನೆ.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img