Letters

Letters 14 – Consolatory & Advisory to Lady Devotees

೧೪. ಪ್ರಾರಬ್ಧ ನಿನ್ನನ್ನು ಗ್ರಹಸ್ಥಾಶ್ರಮಕ್ಕೆ ತಳ್ಳಿದರೂ ನಿನ್ನ ಆತ್ಮನಿಷ್ಠೆಯನ್ನು ಅಲುಗಾಡಿಸುವ ಸಾಮರ್ಥ್ಯ ಅದಕ್ಕಿಲ್ಲ.

(ಮೇಲಿನ ಸಂದರ್ಭದಲ್ಲೇ ಮಾತೋಶ್ರೀ ರಾಧಾತಾಯಿಗೆ ಬರೆದ ಪತ್ರ)

ಸ್ವರ್ಗಾಶ್ರಮ
ಚಿ.ಸೌ. ರಾಧೆಗೆ ಆಶೀರ್ವಾದ,
ಮಗಾ, ನಿರಾಶಳಾಗಬೇಡ. ಪ್ರಾರಬ್ಧ ನಿನ್ನನ್ನು ಗ್ರಹಸ್ಥಾಶ್ರಮಕ್ಕೆ ತಳ್ಳಿದರೂ ನಿನ್ನ ಆತ್ಮನಿಷ್ಠೆಯನ್ನು ಅಲುಗಾಡಿಸುವ ಸಾಮರ್ಥ್ಯ ಅದಕ್ಕಿಲ್ಲ. ಭಾವನೆ, ಭೋಗ, ದೇಹ, ಆಶ್ರಮಧರ್ಮ-ಕರ್ಮ-ಸಂಸ್ಕಾರ ಮತ್ತು ಸಂಚಿತಗಳೆಲ್ಲವನ್ನೂ ಕೂಡಿಸಿಕೊಂಡೇ, ಇವೆಲ್ಲವನ್ನೂ ಪ್ರಕಾಶಿಸುತ್ತಲೇ ಇದ್ದು ಆದರೆ ಇವೆಲ್ಲಕ್ಕೂ ಅಸಂಗರೀತಿಯಲ್ಲಿ ಯಾವುದು ನಿನಗೆ ನಿತ್ಯ ನಿರ್ವಿಕಾರ ಸ್ವರೂಪ ನಿಜಬೋಧರೂಪದಲ್ಲಿ ಸ್ಫುರಣರೂಪವಾಗಿದೆಯೋ ಆ ಕಡೆಗೆ ನಿನ್ನ ವಿಶುದ್ಧ ವಿವೇಕದ ದೃಷ್ಟಿ ತಿರುಗಿಸು ಮತ್ತು ದೇಹದ ಪ್ರಾರಬ್ಧಗಳ ಕೇವಲ ಪ್ರಕಾಶಕನಾಗಿರುವ ಚಿದಾನಂದಬ್ರಹ್ಮನಾಗಿಯೇ ಇರು.

ನಿನ್ನ ನಿತ್ಯ ನಿರ್ವಿಕಾರ ಆತ್ಮ
ಶ್ರೀಧರ

home-last-sec-img