Letters

Letters 16 – Consolatory & Advisory to Lady Devotees

೧೬. ಮನೆಯಲ್ಲಿ ಕಾಮಧೇನುವನ್ನಿಟ್ಟುಕೊಂಡು ಮಜ್ಜಿಗೆ ಬೇಡುವಂತೆ!’ …. ‘ಕಲ್ಪವೃಕ್ಷದ ಕೆಳಗೇ ನಿಂತು ದುಃಖ ಪಡುವಂತೆ!’ ಆಗಬಾರದು! ಎಚ್ಚೆತ್ತಿಕೋ!

(ಇಸವಿ ಸನ ೧೯೪೮ರಲ್ಲಿ ಸೌ. ರಾಧೆಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||

ಮಂಗಳೂರು
ದಿ. ೫-೪-೧೯೪೮
ಚಿ.ಸೌ.ರಾಧೆಗೆ ಆಶೀರ್ವಾದ
ಮಗಾ!
‘ನಮಃ ಶಾಂತಾಯ ….’ ಈ ಮಂತ್ರದ ಜಪ ನೀನೂ ಮಾಡು ಮತ್ತು ನಿನ್ನ ಯಜಮಾನರಿಗೂ ಮಾಡಲಿಕ್ಕೆ ಹೇಳಿದ್ದೇವೆಂದು ಹೇಳು! ಶ್ರೀಗುರು ನಮನದ ಈ ಮಂತ್ರ ಜಪದಿಂದ ಸದ್ಗುರು ಕೃಪೆಯಾಗುತ್ತದೆ ಮತ್ತು ನಂತರ ಎಲ್ಲವೂ ಸರಿಯಾಗುತ್ತದೆ! ಮನಸ್ಸಿಗೆ ಶಾಂತಿ ಸಿಗುತ್ತದೆ. ಈ ‘ನಮಃ ಶಾಂತಾಯ …’ ಮಂತ್ರದಿಂದ ಎಷ್ಟೋ ಜನರ ಎಲ್ಲ ಅರಿಷ್ಠಗಳೂ ಹೋಗಿವೆ. ಭಕ್ತಿಭಾವದಿಂದ ಜಪ ಮಾಡಿದರೆ ಅವರಿಗೆ ದೇವರ ಕೃಪೆಯಿಂದ ಎಲ್ಲವೂ ಅನುಕೂಲವಾಗುತ್ತದೆ. ಆಧ್ಯಾತ್ಮ ನಿಷ್ಠೆಯೂ ಹೆಚ್ಚುತ್ತದೆ. ನಿನಗೆ ಸಮಾಧಾನವಾಗಿ ಹೆದರಿಕೆಯಾಗುವದು ಮುಂತಾದ್ದೆಲ್ಲ ಬಿಟ್ಟಿಹೋಗುತ್ತದೆ. ಶ್ರೀ ಪಾದುಕೆಯೂ ಇದೆ. ಅದರ ಮಹತ್ವವೇನೂ ಹೋಗಿಲ್ಲ.

‘ಮನೆಯಲ್ಲಿ ಕಾಮಧೇನುವನ್ನಿಟ್ಟುಕೊಂಡು ಮಜ್ಜಿಗೆ ಬೇಡುವಂತೆ!’ …. ‘ಕಲ್ಪವೃಕ್ಷದ ಕೆಳಗೇ ನಿಂತು ದುಃಖ ಪಡುವಂತೆ!’ ಆಗಬಾರದು. ಎಚ್ಚೆತ್ತಿಕೋ!
ಗುರುಕೃಪೆಯಿಂದ ಸುಖರೂಪವಾಗಿರು! ….. ಎಲ್ಲರಿಗೂ ಆಶೀರ್ವಾದ!
ಎಲ್ಲರೂ ಸುಖವಾಗಿರಿ!

ಶ್ರೀಧರ

home-last-sec-img