Letters

Letters 17 – Consolatory & Advisory to Lady Devotees

೧೭. ಜ್ಞಾನವಿರಹಿತ ಸ್ಥಿತಿಯೆ ಕಾರಣ ಮನದ ತಳಮಳಕೇ!

(ಇಸವಿ ಸನ ೧೯೪೮ರಲ್ಲಿಯೇ ಸೌ. ರಾಧೆಗೆ ಬರೆದ ಇನ್ನೊಂದು ಪತ್ರ)

||ಶ್ರೀರಾಮ ಸಮರ್ಥ||
ಮಂಗಳೂರು
೯-೬-೧೯೪೮
ಚಿ.ಸೌ.ರಾಧೆಗೆ ಆಶೀರ್ವಾದ,
ಮಗಾ,
ನಿನ್ನ ಪತ್ರ ತಲುಪಿತು. ಸ್ತೋತ್ರವನ್ನೂ ಓದಿದೆ. ಅಷ್ಟೇಕೆ ತಳಮಳ? ಜ್ಞಾನವಿರಹಿತ ಸ್ಥಿತಿಯಲ್ಲಿರುವಾಗ ತಳಮಳ ತೊಲಗಲಾರದು!

ಸಹಜಪೂರ್ಣ ಸ್ವರೂಪದಲಿ ಹಾನಿ-ಲಾಭವು ಇಲ್ಲ
ಏಕಮೇವಾದ್ವಿತೀಯದಲಿ ದುಃಖಕೆಣೆಯೆಲ್ಲಿ?

ಸ್ವರೂಪದ ಅನಂತದಲಿ ಕೊರತೆಯೊಂದೂ ಇಲ್ಲ
ನನಗರ್ಥವಾಗದದು; ಯಾಕೆ ಕೊರಗುತಿಹೆ?

ಕರಗಿ ಹೋಗಲಿ ಮನವು ನಿಜ ಆನಂದಘನದಲ್ಲಿ
ಮರೆಯದಿರು ‘ನಾನು’ ಎಂಬೀ ಸ್ಫೂರ್ತಿ ನಿನ್ನ ಮೂಲ!

ಸಕಲ ಭ್ರಾಂತಿಯ ಕಳಚಿ ಇರಲಾತ್ಮಶಾಂತಿಯು ಅಂತರಂಗದಿ
ಮಗುವೆ ಬೆಳಗಲಿ ಬ್ರಹ್ಮಕಾಂತಿಯು ನಿನ್ನ ಮುಖದಲ್ಲೀ

ಶ್ರೀಧರ

home-last-sec-img