Letters

Letters 22 – Consolatory & Advisory to Lady Devotees

೨೨. ಶ್ರೀಗುರು ನಿಮ್ಮ ಹೃದಯದಲ್ಲಿ ಕೇವಲ ಆನಂದರೂಪದಲ್ಲಿ ಪ್ರಕಾಶಿಸುತ್ತಿದ್ದಾನೆ ಎಂಬುದನ್ನು ಯಾವಾಗಲೂ ಲಕ್ಷದಲ್ಲಿಟ್ಟುಕೊಂಡು, ಅವರ ದರ್ಶನ ಪಡೆಯುತ್ತಿರಬೇಕು.

(ಇಸವಿ ಸನ ೧೯೬೨ರಲ್ಲಿ ಶ್ರೀ ಗು. ಬಂ. ರಾಮಚಂದ್ರ ಸಾಗರರವರ ಮಾತೋಶ್ರೀ ಮೂಕಾಂಬಿಕಾ ಮತ್ತು ತಂಗಿ ಗೌರಿ ಸಾಗರ ಅವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||

ಬೆಂಗಳೂರು
೨೭-೦೬-೧೯೬೨
ಚಿ. ಮುಕಾಂಬಿಕೆಗೆ ಮತ್ತು ಚಿ. ಗೌರಿಗೆ ಆಶೀರ್ವಾದಗಳು,
ಮಕ್ಕಳೇ!
ದರ್ಶನವಾಗಿ ಬಹಳ ದಿನಗಳು ಕಳೆದವೆಂದು ನಿಮ್ಮ ಮನಸ್ಸು ತುಂಬಾ ಅಸ್ವಸ್ಥವಾಗಿರಬಹುದು. ಆದರೆ ಶ್ರೀಗುರು ನಿಮ್ಮ ಹೃದಯದಲ್ಲಿ ಕೇವಲ ಆನಂದರೂಪದಲ್ಲಿ ಪ್ರಕಾಶಿಸುತ್ತಿದ್ದಾನೆ ಎಂಬುದನ್ನು ಯಾವಾಗಲೂ ಲಕ್ಷದಲ್ಲಿಟ್ಟುಕೊಂಡು, ಅವರ ದರ್ಶನ ಪಡೆಯುತ್ತಿರಬೇಕು.

ಅವನು ಚರಾಚರ ವಿಶ್ವದ ಸತ್ಯಸ್ವರೂಪನಾಗಿದ್ದಾನೆ. ಶ್ರೀಗುರುಭಕ್ತಿಯಿಂದ ಪ್ರಾಪ್ತವಾಗುವ ಫಲವೆಂದರೆ ಆತ್ಮಸಾಕ್ಷಾತ್ಕಾರ. ಶ್ರೀಗುರುಕೃಪೆಯಿಂದ ಆ ಭಾಗ್ಯ ಪ್ರಾಪ್ತವಾಗಲಿ ಎಂಬುದೇ ನನ್ನ ಆಶೀರ್ವಾದ. ಚಿ. ಮೀನಾಕ್ಷಿಗೂ ಆಶೀರ್ವಾದ.

||ಸರ್ವೇ ಜನಾಃ ಸುಖಿನೋ ಭವಂತು||

ಶ್ರೀಧರ

home-last-sec-img