Letters

Letters 25 – Guidance to Spiritual Seekers

೨೫. ನಿನ್ನ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆಂದರೆ ಒಂದು ಸ್ವತಂತ್ರ ಗ್ರಂಥವನ್ನೇ ಬರೆಯಬೇಕು. ಈಗ ಸ್ವಲ್ಪದರಲ್ಲೇ ಸ್ವಲ್ಪ ಉತ್ತರ ಕೊಡುತ್ತೇನೆ!

(ಇಸವಿ ಸನ ೧೯೬೧ರ ಸುಮಾರಿಗೆ ಶ್ರೀ ಗೋವಿಂದ ಶಂಕರ ಗೋಡಸೆ ಬುವಾ ರಾಮದಾಸಿ, ಸಜ್ಜನಗಡ ಅವರಿಗೆ ಬರೆದ ಪತ್ರ)

ಶ್ರೀರಾಮ ಸಮರ್ಥ
ಸಜ್ಜನಗಢ
ಗುರುಪೂರ್ಣಿಮೆ ಶಕೆ ೧೮೮೩
ಚಿ.ಗೋಡಸೆಗೆ ಆಶೀರ್ವಾದ,
ಮಗಾ, ನಿನ್ನ ಪ್ರಕೃತಿ ಈಗ ಹೇಗಿದೆ? ನೀನು ‘ನೌಲೀ’ ಮಾಡಬೇಕೆಂದು ನನಗನಿಸುತ್ತದೆ. ನೌಲಿಯಿಂದ ಹೊಟ್ಟೆಯ ವಿಕಾರಗಳೂ ಗುಣಹೊಂದುತ್ತದೆ. ‘ಮಯೂರಾಸನ’ವನ್ನೂ ಮಾಡುತ್ತಾ ಇರು. ಇವುಗಳಿಂದ ಹೊಟ್ಟೆಯ ಎಲ್ಲ ವಿಕಾರಗಳೂ ಇಲ್ಲವಾಗುತ್ತವೆ. ಆಸನ ಮಾಡಬೇಕು. ಆಸನದಿಂದ ರೋಗ ಗುಣವಾಗುತ್ತದೆ. ‘ಭಸ್ತ್ರಿಕಾ’ದಂತ ಸುಲಭ ಪ್ರಾಣಾಯಾಮ ಮಾಡಬೇಕು. ಉತ್ಸಾಹ ವರ್ಧಿಸುತ್ತದೆ. ಆರೋಗ್ಯವೂ ಸುಧಾರಿಸುತ್ತದೆ. ನಿನ್ನೆ ರಾತ್ರಿ ಕಣ್ಣೆವೆ ಮುಚ್ಚದೆ ರಾತ್ರಿಯಿಡೀ ಕುಳಿತು ಬಿಡದೇ ಬರೆಯುತ್ತಿದ್ದೆ. ನಿನ್ನ ಪತ್ರ ನಿನ್ನೆವರೆಗೆ ಬಂದಿದ್ದರೆ ನಿನಗೂ ಪತ್ರ ಕಳಿಸುತ್ತಿದ್ದೆ. ನೀನು ಬರುತ್ತೀಯೋ ಇಲ್ಲವೋ ಎಂಬುದು ಸಂದೇಹಾಸ್ಪದವೆಂದೇ ನನಗೆ ತಿಳಿಯಿತು. ಈ ಎಲ್ಲ ಕಾರಣಗಳಿಂದ ನಿನಗೆ ಪತ್ರ ಬರೆಯುವದಾಗಲಿಲ್ಲ. ನಿನಗೆ ಬರೆಯಬಾರದು ಎಂಬ ಉದ್ದೇಶ ಇಲ್ಲವಾಗಿತ್ತು. ಈಗ ಹನ್ನೆರಡೂವರೆ ಆಗಿದೆ. ನಿನ್ನ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆಂದರೆ ಒಂದು ಸ್ವತಂತ್ರ ಗ್ರಂಥವನ್ನೇ ಬರೆಯಬೇಕು. ಸ್ವಲ್ಪದರಲ್ಲೇ ಸ್ವಲ್ಪ ಉತ್ತರ ಕೊಡುತ್ತೇನೆ!

೧. ವೈರಾಗ್ಯ ಪರಮಾರ್ಥದ ಕಡೆ ಸೆಳೆಯುತ್ತದೆ. ಆ ವೈರಾಗ್ಯ, ವಿಷಯಗಳ ಅನುಭವದಿಂದ ಆಗುವ ಬಾಧೆಯಿಂದ, ತ್ರಿವಿಧ ತಾಪಗಳಿಂದ, ಅನೇಕ ಆಘಾತಗಳಿಂದ ಬದ್ಧ ಮನುಷ್ಯನನ್ನು ಹೊಸಹಾದಿಯಲ್ಲಿ ವಿಚಾರಿಸುವಂತೆ ಮಾಡಿ ‘ಇದರಲ್ಲಿ ಸುಖವಿಲ್ಲ, ಸಂಸಾರ ದುಃಖಮೂಲವಾಗಿದೆ’ ಈ ಭಾವನೆ ನಿರ್ಮಾಣವಾಗುವಂತೆ ಮಾಡುತ್ತದೆ ಮತ್ತು ಆಗ ಭಕ್ತಿ, ಯೋಗ, ಜ್ಞಾನ ಇತ್ಯಾದಿ ಸಾಧನೆಗಳಿಂದ ವೃತ್ತಿ ಅಂತರ್ಮುಖವಾಗ ಹತ್ತಿದ ಮೇಲೆ ನಿರ್ವಿಷಯ ಸುಖದ ಅನುಭವ ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ಲಭಿಸಲು ಪ್ರಾರಂಭವಾಗುತ್ತದೆ ಮತ್ತು ಅದರ ಪೂರ್ಣತ್ವ ಆತ್ಮಸಾಕ್ಷಾತ್ಕಾರದಿಂದ ಲಭಿಸುತ್ತದೆ.

೨. ಮನಸ್ಸನ್ನು ನಿಯಂತ್ರಿಸಲು ವಿಷಯಗಳ ದೃಷ್ಟಿ ದೋಷಪೂರ್ಣ ಮತ್ತು ನಿರ್ವಿಷಯ ಆತ್ಮರೂಪದ ಸುಖ ಅನಂತ ಎಂಬ ದೃಢ ನಿಶ್ಚಯವಿರಬೇಕು.

೩. ಧ್ಯಾನಗಳ ಪ್ರಕಾರಗಳು ಅನೇಕವಿವೆ. ಧ್ಯಾನದಿಂದ ‘ದೃಷ್ಟಿಸಾಧನ’ವಾಗಿ, ‘ತೇಜ’ದ ಸಾಕ್ಷಾತ್ಕಾರವಾಗುತ್ತದೆ ಮತ್ತು ‘ಆತ್ಮ ಸರ್ವ ಪ್ರಕಾಶಕ ಮತ್ತು ಸ್ವತಃ ಸ್ವಯಂಪ್ರಕಾಶಕ ಇದ್ದಾನೆ’ ಎಂಬ ‘ಅರಿವು’ ಹುಟ್ಟಿ ಕ್ರಮೇಣ ಆತ್ಮಸಾಕ್ಷಾತ್ಕಾರವಾಗುತ್ತದೆ. ಉಪಾಸನೆಯ ಸಗುಣಧ್ಯಾನ ಸಾವಯವ, ಸಾಕಾರವಿರುತ್ತದೆ. ನಿರ್ಗುಣ ಧ್ಯಾನ ಆನಂದರೂಪದ ಕೇವಲ ‘ಅರಿವಿ’ನದ್ದಾಗಿರುತ್ತದೆ. ಚರಣಾಂಗುಷ್ಟದಿಂದ ಧ್ಯಾನ ಮಾಡುತ್ತ ಸಂಪೂರ್ಣ ಮೂರ್ತಿಯ ಧ್ಯಾನ ದೃಢ ಮಾಡಬೇಕು. ನಂತರ, ಉಪಾಸನೆಯ ಕೃಪಾಪೂರ್ಣ ನಾಸ್ಯಾಂತದಲ್ಲಿ ಪ್ರಕಟವಾದ ‘ಸ್ವರೂಪಾನಂದದ ಅರಿವಿ’ನದೊಂದೇ ಧ್ಯಾನ ಉಳಿಯಬೇಕು. ಇದು ಸಗುಣದಿಂದ ನಿರ್ಗುಣಕ್ಕೆ ಹೋಗುವ ಕ್ರಮವಾಗಿದೆ.

೪. ಒಂದು ತೆರೆ ಉತ್ಪನ್ನವಾಗಿ ತಂಗಿದ ಮೇಲೆ, ಎರಡನೇ ತೆರೆ ಉತ್ಪನ್ನವಾಗುವ ಮೊದಲು ಸಮುದ್ರದ ಪ್ರಷ್ಟಭಾಗ ಸಮ ಪಾತಳಿಯಲ್ಲಿರುವಂತೆ, ಒಂದು ವೃತ್ತಿ ಲೀನವಾಗಿ ಇನ್ನೊಂದು ವೃತ್ತಿ ಏಳುವ ಮೊದಲು ಕೇವಲ ಒಂದು ‘ನಿರ್ವಿಕಲ್ಪ ಅರಿವು’ ಉಳಿಯುತ್ತದೆ. ಎರಡು ವೃತ್ತಿಗಳ ಮಧ್ಯದ ಸಂಧಿಕಾಲದ ‘ನಿರ್ವಿಕಲ್ಪ ಅರಿವಿ’ನ ಅಭ್ಯಾಸ ಮಾಡುವದು ಎಂದರೆ ವೃತ್ತಿ-ಅಭ್ಯಾಸ. ‘ಯಾವುದೇ ಕಲ್ಪನೆ ಮಾಡದೇ ಕಲ್ಪನೆಯನ್ನು ಪ್ರಕಾಶಿಸುವ ‘ನಿರ್ವಿಕಲ್ಪ ಅರಿವು’ ಒಂದೇ ಉಳಿಯಬೇಕು’ ಇದು ವೃತ್ತಿಲಯದ ಅಥವಾ ವೃತ್ತಿಯ ಅಭ್ಯಾಸ ಮಾಡುವದು ಎಂದೆನಿಸುವದು.

೫. ಜ್ಞಾನಮಾತ್ರ ಪೂರ್ವಸ್ವರೂಪದಿಂದ ವೃತ್ತಿ ಅಥವಾ ಸ್ಫುರಣೆ ಏಳದಂತೆ ಅಂತರ್ಮುಖವಾಗಿರಬೇಕು.
೬. ‘ನಾನು’ ಎಂಬ ಸ್ಫುರಣೆಯ ಲಕ್ಷ ‘ನಾನೇ ಒಂದು ಆನಂದಘನ ಪರಬ್ರಹ್ಮನಿರುವೆ’ ಹೀಗೆ ನಿತ್ಯಾನುಸಂಧಾನದ ಅಭ್ಯಾಸ ಮಾಡಬೇಕು.

೭. ಆನಂದರೂಪದ ನಮ್ಮ ವೃತ್ಯಾತ್ಮಕ ಅರಿವು ನಷ್ಟವಾಗಿ ನಿರ್ವಿಕಲ್ಪ ಆನಂದವೇ ಒಂದೇ ಒಂದು ಸ್ವರೂಪವಾಗಿ ಉಳಿದಾಗ, ಅದಕ್ಕೆ ‘ಸಮಾಧಿ’ ಎನ್ನುತ್ತಾರೆ. ಧ್ಯಾನದ ವಿಸ್ಮೃತಿಯ ಈ ‘ಸಮಾಧಿ’ ಆನಂದರೂಪವೇ. ‘ನಾವಿದ್ದೇವೆ’ ಎಂದು ಕಲ್ಪನೆ ಮಾಡಿ …. ಆ ಕಲ್ಪನೆ ಇಲ್ಲದಂತೆ ಮಾಡಿ …. ನಿರ್ವಿಕಲ್ಪ ಆನಂದಸ್ವರೂಪ ಮಾತ್ರವಾಗಿರುವ ಅಭ್ಯಾಸ ಅಂದರೆ ಸಮಾಧಿಯ ಅಭ್ಯಾಸ.
೮. ಆತ್ಮಸ್ವರೂಪದ ದೃಢ ನಿಶ್ಚಯದಿಂದ ಶೀಘ್ರಾತಿಶೀಘ್ರ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಿ.

ನಿನ್ನನ್ನೂ ಹಿಡಿದು ಎಲ್ಲರ ಮೇಲೂ ಕೃಪೆ ಇದೆ. ಎಲ್ಲರೂ ಆನಂದದಿಂದ ಸಾಧನೆ ಮಾಡಿ ಕೃತಾರ್ಥರಾಗಿರಿ.
ಶ್ರೀಧರ

home-last-sec-img