Letters

Letters 27 – Guidance to Spiritual Seekers

೨೭. ಮಾಯೆ ಮತ್ತು ಅದರ ಕಾರ್ಯ ಇವೆಲ್ಲ ಅಚಿಂತ್ಯ ಮತ್ತು ಶಬ್ದದಿಂದ ಹೇಳಲಿಕ್ಕೆ ಬರದಿರುವದರಿಂದ ಆ ವಿಷಯದಲ್ಲಿ ಏನು ಹೇಳುವದು?

(ಇಸವಿ ಸನ ೧೯೬೧ರಲ್ಲಿ ಶ್ರೀ ರಾಮಚಂದ್ರ ಸಾಗರ ವರದಪುರ ಅವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||

ಸಜ್ಜನಗಡ
ಆಷಾಢ ಶು|೧೫, ಶಕೆ೧೮೮೧
೨೭-೭-೧೯೬೧
ಚಿ.ರಾಮಚಂದ್ರನಿಗೆ ಆಶೀರ್ವಾದ,
೧. ಮೌನ ಅಂದರೆ ನಿಃಶಬ್ದರೀತಿಯಿಂದ ಇರುವದು.
೨. ‘ನಿಃಶಬ್ದ ಬ್ರಹ್ಮನೇ ನಮ್ಮ ಸ್ವರೂಪವಿದೆ’ ಈ ದೃಢ ಭಾವನೆ ಸ್ಥಿರವಿರಬೇಕೆಂದೇ ಮೌನ ಆಚರಿಸಬೇಕು.
೩. ನಿರ್ವಿಕಲ್ಪ, ನಿಃಶಬ್ದ ಸ್ವರೂಪದ ಸಾಕ್ಷಾತ್ಕಾರವೇ ಮೌನದ ಧ್ಯೇಯ.
೪. ನಿರ್ವಿಕಲ್ಪ, ನಿಃಶಬ್ದ ಸ್ವರೂಪಸಾಧನೆಗಾಗಿ ಮೌನದ ಮಹತ್ವವಿದೆ.
೫. ಮಾಯೆ ಮತ್ತು ಅದರ ಕಾರ್ಯ ಇವೆಲ್ಲ ಅಚಿಂತ್ಯ ಮತ್ತು ಶಬ್ದದಿಂದ ಹೇಳಲಿಕ್ಕೆ ಬರದಿರುವದರಿಂದ ಆ ವಿಷಯದಲ್ಲಿ ಏನು ಹೇಳುವದು? ಅದಕ್ಕಾಗಿಯೇ ಮೌನವಿಡಬೇಕು. ಆತ್ಮಸ್ವರೂಪ ಅಥವಾ ಬ್ರಹ್ಮಸ್ವರೂಪ ಮನಸ್ಸಿಗೆ ಅಪ್ರಾಪ್ಯವಾಗಿರುವದರಿಂದ ವಾಣಿಯಿಂದ ತಿಳಿಸಿ ಹೇಳುವದು ಅಶಕ್ಯವಾಗಿರುವದರಿಂದ ಆ ವಿಷಯದಲ್ಲಿ ಕೂಡಾ ಏನು ಹೇಳುವದು? ಅದಕ್ಕಾಗಿಯೇ ಮೌನದ ಅವಶ್ಯಕತೆ ಇದೆ.

೬. ಶಬ್ದ, ವಾಣಿಗಳು ಹೇಳದೇ, ಅಂತರಂಗದಲ್ಲಿ ಸ್ಫೂರ್ತಿ ಬರುವವರೆಗೆ ಮೌನ ಆಚರಿಸಬೇಕು. ಅದಕ್ಕೇ ಮೌನದ ಉಚ್ಚಾವಸ್ಥೆ ಎಂದು ಹೇಳಬಹುದು. ಅದಾಗದಿದ್ದಲ್ಲಿ ಮೇಲೆ ಹೇಳಿದಂತೆ, ಮನಸ್ಸಿನ ವಿಚಾರವನ್ನು ಹಿಡಿಯದೇ, ಮೌನಾಚರಣೆ ಮುಂದುವರಿಸಬೇಕು.

ಒಟ್ಟಿನ ಮೇಲೆ ನಿನ್ನ ಎಲ್ಲ ಪ್ರಶ್ನೆಗಳಿಗೆ ಕ್ರಮಶಃ ಉತ್ತರಿಸಿದ್ದೇನೆ.

||ಸರ್ವೇ ಜನಾಃ ಸುಖಿನೋ ಭವಂತು||

ಆನಂದರೂಪಿ
ಶ್ರೀಧರ

home-last-sec-img