Letters

Letters 28 – Guidance to Spiritual Seekers

೨೮. ನಿನ್ನ ‘ಅಹಂ’ ಸ್ಫೂರ್ತಿಯನ್ನು, ತತ್ಪೂರ್ವದ ನಿರ್ವಿಕಲ್ಪ ಸಚ್ಚಿದಾನಂದದ ಕಡೆ ತಿರುಗಿಸಿ, ಅದರಲ್ಲೇ ಲೀನ ಮಾಡುವದು ಅಂದರೇ ಶ್ರೀಗುರುವಿನ ಧ್ಯಾನ ಮತ್ತು ಅದರ ಸ್ಮೃತಿಯಿಂದ, ಅನಾತ್ಮಪದಾರ್ಥದ ಅಭಿಮಾನ ಅಡ್ಡ ಬರದಂತೆ ವಿವೇಕದಿಂದ ಇರುವದು ಅಂದರೇ ಗುರುಸೇವೆ!

(ಇಸವಿ ಸನ ೧೯೪೬-೪೭ರ ಸುಮಾರಿಗೆ ಶ್ರೀ ಅಣ್ಣಾ ಗಾಡಗೀಳ ಗೊಂದಾವಲೆಯವರಿಗೆ ಬರೆದ ಪತ್ರ)

||ಓಂ||
ಸ್ವರ್ಗಾಶ್ರಮ
ಫಾಲ್ಗುಣ ಶು| ೧೫| ೧೮೬೯
ಚಿ. ಅಣ್ಣಾನಿಗೆ ಆಶೀರ್ವಾದ
ನಿನ್ನೆನೇ ನಿನ್ನ ಪತ್ರ ಬಂದು ತಲುಪಿತು. ಶ್ರೀಸಮರ್ಥ ಕೃಪೆಯಿಂದ ನಮ್ಮೆಲ್ಲರ ದೇಹಪ್ರಕೃತಿ ಚೆನ್ನಾಗಿದೆ. ನಿಮ್ಮೆಲ್ಲರ ಕ್ಷೇಮ ಸಮಾಚಾರ ತಿಳಿಯಿತು. ಚಿ.ಭಾವುವಿನ ದೇಹಸ್ಥಿತಿ ಮೊದಲಿನಂತೆಯೇ ಇದೆ ಎಂದು ನಿನ್ನ ಪತ್ರ ನೋಡಿ ತಿಳಿಯಿತು. ಈಶ್ವರ ಕೃಪೆಯಿಂದ ಅವನ ಪ್ರಕೃತಿ ಉತ್ತಮವಾಗಲಿ.

ಶ್ರೀದಾಸಬೋಧ ಓದುತ್ತಾ ಇದ್ದೀಯೆ. ‘ಪ್ರಾಣಿಮಾತ್ರರು ಏನೇನು ಇಚ್ಛಿಸುತ್ತಾರೋ ಅವೆಲ್ಲವೂ ಲಭಿಸಲಿ’ ಎಂಬ ಇಚ್ಛೆಯಿಂದಲೇ ಶ್ರೀಸಮರ್ಥರು ದಾಸಬೋಧ ಅಂದರೆ ಒಂದು ಕಲ್ಪತರುವನ್ನೇ, ಭಕ್ತರ ಇಚ್ಛೆ ಪೂರ್ಣವಾಗಲು, ತಮ್ಮ ಅವತಾರ ಸಮಾಪ್ತಿಯ ನಂತರ ತಮ್ಮದೇ ರೂಪವೆಂದು ಹೇಳಿ, ತಮ್ಮ ‘ಸಮರ್ಥ’ ಹೆಸರಿನ ಉಜ್ವಲ ಕೀರ್ತಿ ಶಾಶ್ವತವಾಗಿಡಲಿಕ್ಕೆಂದೇ, ತಮ್ಮ ಸರ್ವ ಸಾಮರ್ಥ್ಯವನ್ನೇ, ಇದರಲ್ಲಿ ತಮ್ಮ ನಂತರವೆಂದು ಇಟ್ಟಿದ್ದಾರೆ. ದಾಸಬೋಧ ‘ಯಾವನು ಏನನ್ನು ಇಚ್ಛಿಸುತ್ತಾನೋ ಅವನಿಗೆ ಅದನ್ನು’, ‘ಯಾವ ಯಾವ ಕಾಮನೆಯಿದೆಯೋ ಆ ಆ ಕಾಮನೆಯನ್ನು’ ಸಿದ್ಧಿಸುತ್ತದೆ, ಎಂದರೆ ಇದು ಕೇವಲ ಗ್ರಂಥಾಭಿಮಾನದ ಮಾತಲ್ಲ. ಇದು ಸತ್ಯದ ಅಭಿಮಾನ; ಹಾಗಾಗಿ ನಿರಭಿಮಾನ ಎಂದೇ ಗ್ರಹಿಸಲ್ಪಡುತ್ತದೆ. ‘ಗ್ರಂಥದ ಸ್ತುತಿ – ಸ್ತವನ ಮಾಡಬೇಕು. ಆದರೂ ಕೇವಲ ಸ್ತುತಿಯಿಂದೇನು ಪ್ರಯೋಜನ? ಇಲ್ಲಿ ಪ್ರತ್ಯಕ್ಷ ಪ್ರಮಾಣವೇ ಇದೆ. ಪ್ರಮಾಣವನ್ನೇ ನೋಡು’
ಏಳೆಂಟು ದಿವಸಗಳೊಳಗೆ ಇಲ್ಲಿಂದ ನನ್ನ ಮುಂದಿನ ಪಯಣ ಪ್ರಾರಂಭವಾಗುವದು. ಗಿರಿನಾರಿಗೆ ಹೋಗುವನಿದ್ದೇನೆ. ಕೆಲವು ದೃಷ್ಟಾಂತವಾಗಿದ್ದರಿಂದ ನನಗೆ ಅಲ್ಲಿಗೆ ಹೋಗಬೇಕಾಗಿದೆ. ಅಲ್ಲಿಗೆ ಎಂದು ಬರಬಹುದು ಎಂಬುದನ್ನು ಈಗಲೇ ಹೇಳಲಿಕ್ಕೆ ಬರುವದಿಲ್ಲ. ಅಲ್ಲಿ ಹೋದ ಮೇಲೆ ನೋಡೋಣ. ಅಲ್ಲಿಯ ಸ್ಥಳದ ಪೂರ್ವ ಪರಿಚಯವಿಲ್ಲದಿರುವದರಿಂದ ವಿಳಾಸ ಈಗಲೇ ಕೊಡಲಾಗುವದಿಲ್ಲ.

‘ಆದ್ಯೋ ‘ರಾ’ ತತ್ಪದಾರ್ಥಃಸ್ಯಾನ್ಮಕಾರಸ್ತ್ವಂ ಪದಾರ್ಥವಾನ್| ತಯೋಃಸಂಯೋಜಮಸೀತ್ಯರ್ಥೇ ತತ್ವವಿದೋ ವಿದುಃ|
‘ಯತ್ಪರಬ್ರಹ್ಮಸರ್ವಾತ್ಮಾ ವಿಶ್ವಸ್ಯಾಯತನಂ ಮಹತ್|
ಸೂಕ್ಷ್ಮಾತ್ಸೂಕ್ಷ್ಮತರ ನಿತ್ಯಂ ಸತ್ವಮೇವತ್ವೇವ ತತ್||
‘ಅಹಂ’ ಪ್ರತ್ಯಯದ ಲಕ್ಷ ಅದ್ವಿತೀಯ ಜ್ಞಾನೋದಯವೇ ಇದೆ’ ಎಂಬ ದೃಢ ನಿಶ್ಚಯದ, ವಾಸ್ತವ ಬುದ್ಧಿವಂತರ ಮಾರ್ಗವೇ ಈ ನಿವೃತ್ತಿಮಾರ್ಗದ ಸಂಪ್ರದಾಯ.

ನಿನ್ನ ‘ಅಹಂ’ ಸ್ಫೂರ್ತಿಯನ್ನು, ತತ್ಪೂರ್ವದ ನಿರ್ವಿಕಲ್ಪ ಸಚ್ಚಿದಾನಂದದ ಕಡೆ ತಿರುಗಿಸಿ, ಅದರಲ್ಲೇ ಲೀನ ಮಾಡುವದು ಅಂದರೇ ಶ್ರೀಗುರುವಿನ ಧ್ಯಾನ ಮತ್ತು ಅದರ ಸ್ಮೃತಿಯಿಂದ, ಅನಾತ್ಮಪದಾರ್ಥದ ಅಭಿಮಾನ ಅಡ್ಡ ಬರದಂತೆ ವಿವೇಕದಿಂದ ಇರುವದು ಅಂದರೇ ಗುರುಸೇವೆ. ನನ್ನ ಅಗಲಿಕೆಯೆಲ್ಲಿದೆ? ‘ಸ್ಮರಿಸಿದಾಕ್ಷಣ ಸಿಗುತ್ತೇನೆ’ ಬಾಬಾ, ಈ ರೀತಿಯ ಸದ್ಗುರುವಿನ ದರ್ಶನವೇ ಭವನಿವಾರಕವಾಗಿದೆ.

‘ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್’ ಹೀಗೇ ಸದ್ಗುರುವಿನ ರೂಪವನ್ನು ವರ್ಣಿಸಿದ್ದಾರೆ.
‘ಸೋಹಂ ಆತ್ಮಾ ಸ್ವಾನಂದಘನ| ಅವನು ಅಜನ್ಮನು ಅರಿತಿಕೋ| ಇದೇ ಸದ್ಗುರುವಚನ| ಹೃದಯದಲ್ಲಿದನ್ನು ಧರಿಸಿರು||’

|ಇತಿ ಶಮ್| |ಸರ್ವೇ ಭದ್ರಾಣಿ ಪಶ್ಯಂತು|

ಪ್ರಾಣಿಮಾತ್ರರ ಶುದ್ಧ ಸ್ವರೂಪ
ಶ್ರೀಧರ

home-last-sec-img