Letters

Letters 31 – Guidance to Spiritual Seekers

೩೧. ಪೂರ್ವಾರ್ಜಿತ ಪಾರಮಾರ್ಥಿಕ ವಾಸನೆ, ಕ್ರಮಶಃ ಸಾಧನೆ, ಯೋಗಾಭ್ಯಾಸ, ಉಪನಿಷದ್ದಾದಿ ಪ್ರಸ್ಥಾನ ತ್ರಯ ವಿದ್ವತ್ತು, ಸಂತ ದರ್ಶನ, ಶಾಸ್ತ್ರಾಭ್ಯಾಸ ಎಲ್ಲವೂ ಇರುವಾಗ, ಅದೇಕೆ ‘ನಾತ್ಮಲಾಭಾತ್ಪರೋಲಾಭಃ’ ‘ನ ದೇವಃ ಸ್ವಾತ್ಮನಃ ಪರಃ’ ?
(ಇಸವಿ ಸನ ೧೯೪೬-೪೭ರ ಸುಮಾರಿಗೆ ಶ್ರೀ ಬಳವಂತರಾವ ವೈದ್ಯರಿಗೆ ಬರೆದ ಪತ್ರ)

||ಓಂ||
ಮಹರ್ಷಿ ಗುರುಕುಲ ಬ್ರಹ್ಮಚರ್ಯಾಶ್ರಮ, ಗಿರಿನಾರ ರೋಡ,
ಜುನಾಗಡ, ಕಾಠೇವಾಡ, ವೈಶಾಖ| ಶು|೧೨

-ಓಂ ಶ್ರೀರಾಮ-
ದೇಹ ಪರಮಾರ್ಥಕ್ಕೆ ಹಚ್ಚು| ಅದುವೆ ಸಾರ್ಥಕ ಬಾಳು|
ಅದಲ್ಲದೇ ವ್ಯರ್ಥವೀ ಜೀವ| ಹೆಜ್ಜೆ ಹೆಜ್ಜೆಗು ಆಘಾತಸರಣಿಯು ಈ ಮೃತ್ಯುಪಥದಲ್ಲೀ||
ಶ್ರೀಸಮರ್ಥ

ಶ್ರೀ ಸ. ಭ. ಬಳವಂತರಾವ (ವೈದ್ಯ) ರಿಗೆ ನಾರಾಯಣಸ್ಮರಣಪೂರ್ವಕ ಆಶೀರ್ವಾದ,
ತಮ್ಮ ವೈಶಾಖ ಶುದ್ಧ ೩ನೇ ತಿಥಿಯ ಪತ್ರ ಬಂದು ತಲುಪಿತು. ತಮ್ಮ ಆಗಮನದ ವೃತ್ತಾಂತ ಚಿ.ಬರಗೇಯಿಂದ ಬಂದ ಪತ್ರಮುಖೇನ ತಿಳಿದುಬಂದು, ಶ್ರೀ ನಿರ್ವಾಣಜೀಯವರಿಗೆ ಕಳುಹಿಸಿದ ಪತ್ರದ ಮೂಲಕವಾಗಿ ತಮಗೂ ಬರೆದಿದ್ದೆ. ಅದು ಇಷ್ಟರೊಳಗೇ ಸಿಕ್ಕಿದ್ದರಂತೂ ಉತ್ತಮವೇ ಆಯಿತು. ಸಿಗದಿದ್ದ ಪಕ್ಷದಲ್ಲಿ ಅದಕ್ಕಾಗಿಯೇ ಶ್ರೀನಿರ್ವಾಣಜೀಯವರ ಕಡೆ ಹೋಗಬೇಕೆಂದಿಲ್ಲ. ವಿಶೇಷವಾದದ್ದೇನೂ ಆ ಪತ್ರದಲ್ಲಿ ಬರೆದಿರಲಿಲ್ಲ. ಚಿ.ದಿನಕರ ದೇಶಪಾಂಡೆಗೆ ಬರೆದ ಪತ್ರದಲ್ಲಿ ‘ನನ್ನ ಮುಕ್ಕಾಮ ಸದ್ಯದಲ್ಲೇ ಬದಲಾಗುವದಿದೆ. ಶ್ರೀರಾಮನವಮಿಗೆ ನಾನು ಇಲ್ಲಿರುವದಿಲ್ಲ’ ಎಂದು ಬರೆದಿದ್ದೆ. ಇರಲಿ!
ತಮ್ಮಪತ್ರದಲ್ಲಿ ‘ಈಗಂತೂ ಒಳ್ಳೆಯದೇ ಆಯಿತು. ಇಲ್ಲಿ ಗಂಗಾಸ್ನಾನ, ಧ್ಯಾನಾಭ್ಯಾಸ ಮತ್ತು ಗೀತಾಭಾಷ್ಯ ವಾಚನ ಮತ್ತು ನಿತ್ಯ ನಿಯಮದ ಆಚರಣೆ ಇಟ್ಟುಕೊಂಡಿದ್ದೇನೆ’ ಎಂದು ತಾವು ಬರೆದಿದ್ದು ನೋಡಿ ಶ್ರೀಪೂಜ್ಯಪಾದ ಆಚಾರ್ಯರ ಈ ವಚನದ ನೆನಪಾಯಿತು.

ಭಗವದ್ಗೀತಾ ಕಿಂಚಿದಧೀತಾ| ಗಂಗಾಜಲ ಲವಕಣಿಕಾ ಪೀತಾ|
ಸಕೃದಪಿ ಯಸ್ಯ ಮುರಾರಿಸಮರ್ಚಾ| ತಸ್ಯ ಯಮಃ ಕಿಂಕುರುತೇ ಚರ್ಚಾ||
ಶ್ರೀಪೂಜ್ಯಪಾದರ ಈ ವಚನದಿಂದ ತಮ್ಮ ಕಾರ್ಯಕ್ರಮದ ಮಹತ್ವದ ಪೂರ್ಣ ಕಲ್ಪನೆ ಯಾರಿಗಾದರೂ ಬರುವಂತಿದೆ.
ಮೊದಲು ಕರ್ಮವ ಮಾಡು| ಕರ್ಮಮಾರ್ಗದಿ ಉಪಾಸನೆಯ|
ಜ್ಞಾನ ದೊರೆಯಲು ಉಪಾಸಕಗೆ| ಜ್ಞಾನದಿಂ ಪಡೆ ಮೋಕ್ಷವ|
ಸ್ವವರ್ಣಾಶ್ರಮಧರ್ಮಣೇನ ತಪಸಾ ಹರಿತೋಷಣಾತ್| ಸಾಧನಂ ಪ್ರಭವೇತ್ಪುಂಸಾಮ್ ವೈರಾಗ್ಯಾದಿ ಚತುಷ್ಟಯಮ್|| –

ವಾರಾಹೋಪನಿಷದ್ದು
ತಪಃ ಪ್ರಭಾವಾದ್ಯೇವ ಪ್ರಸಾದಾಚ್ಚ ಬ್ರಹ್ಮ ಹ ಶ್ವೇತಾಶ್ವತರೋಯ ವಿದ್ವಾನ್|
ಉಪನಿಷದಂ ಭೋ ಬ್ರುಹೀತ್ಯುಕ್ತಾ ತ್ತ ಉಪನಿಷದ್ಬ್ರಾಹ್ಮಿ ವಾವ ತ ಉಪನಿಷದಮಬ್ರೂಮೇತಿ| ತಸ್ಯೈ ತಪೋ ದಮಃ ಕರ್ಮೇತಿ ಪ್ರತಿಷ್ಠಾ ವೇದಾಃ ಸರ್ವಾಂಗಾನಿ ಸತ್ಯಮಾಯತನಮ್| – ಕೇನೋಪನಿಷದ್ದು
ಇತ್ಯಾದಿ ವಚನಗಳಂತೆ ತಮ್ಮ ಸಾಧನೆ ಕ್ರಮಶಃ ಆಗಿದೆ. ಉದ್ಧಟ ಚಿತ್ತವೃತ್ತಿಗಳ ನಿರೋಧಕ್ಕಾಗಿ ಯೋಗಾಭ್ಯಾಸವೂ ತಮ್ಮಿಂದ ಆಗಿದೆ. ತಮ್ಮ ಸರ್ವಾಂಗಿಕ ತಯಾರಿ ಆಗಿದೆ. ವಿದ್ವಾನರಿದ್ದೀರಿ. ಉಪನಿಷದ್ದು ಮೊದಲಾದ ಪ್ರಸ್ಥಾನತ್ರಯವನ್ನೂ ತಾವು ಚೆನ್ನಾಗಿ ಅರಿತಿದ್ದೀರಿ. ತಮ್ಮ ಬಾಲಕಾಲದಲ್ಲೇ ನಿಮ್ಮಲ್ಲಿ ಪೂರ್ವಜನ್ಮಾರ್ಜಿತ ಪಾರಮಾರ್ಥಿಕ ವಾಸನೆ ಉದ್ಭವಿಸಿತು. ಅನೇಕ ಸಂತ-ಮಹಂತರನ್ನೂ ತಾವು ಭಕ್ತಿಭಾವದಿಂದ ದರ್ಶನ ಮಾಡಿದ್ದೀರಿ. ‘ದರ್ಶನೇವ ಸಾಧೂನಾಮ್’ ಯಾವ ಫಲ ಸಿಗುತ್ತದೆಯೋ ಅವೂ ಕೂಡ ನಿಮಗೆ ಅಪರಿಚಿತವಾದದ್ದಲ್ಲ.

‘ಮಹತ್ಸಂಗಸ್ತು ದುರ್ಲಭೋಗಮ್ಯೋಮೋಘಶ್ಚ ಲಭ್ಯತೇ ತತ್ಕೃಪಯೈವ|’
ನಾರದ ಭಕ್ತಿ ಸೂತ್ರದ ಈ ಮೇಲಿನ ಶ್ಲೋಕ ತಮಗೆ ಪರಿಚಿತವೇ.
ಈ ಕೆಳಗಿನ ಸಮರ್ಥರ ವಾಣಿಯೂ ನಿಮಗೆ ಹೊಸತಲ್ಲ.
‘ಯಾರನದೆಷ್ಟು ಹುಡುಕಿದೆನೋ ಅದ ನೋಡಿದೆ ಹತ್ತಿರವೆ ಇಲ್ಲಿ|
ತಮ್ಮ ನೋಡಲು ಪೋದೆ ಆಕ್ಷಣವೆ ನಾ ನಿಮ್ಮವನಾದೆ|’
ಈ ರೀತಿಯ ಅನುಭವ ಬರಲಿಕ್ಕಾಗಿ ಸಂತರ, ಶ್ರೀಗುರುವಿನ
‘ಸೋಹಂ ಆತ್ಮಾನಂದಘನ| ಅಜನ್ಮನಾತನು ಅದನರಿತಿಕೋ|
ಇದೇ ಸಾಧುವಚನ| ದೃಢ ನಿಶ್ಚಯದಿ ಹಿಡಿದಿರದನು|’
‘ಮಹಾವಾಕ್ಯದ ಅಂತಸ್ಥ ಸಾರ| ನೀನೇ ಬ್ರಹ್ಮ ನಿರಂತರ| ಈ ವಚನದ ಮರೆವು|
ಆಗದಿರಲಿ ಎಂದಿಗೂ||
ಎಲ್ಲೇ ಹೋದರೂ,‘ಸ್ವೇ ಮಹಿಮ್ನಿ ತಿಷ್ಠತಿ’ ‘ಜೀವೋ ಬ್ರಹ್ಮೈವ ನಾಪರಾ’
ಹೀಗೆಲ್ಲ ಇರುವಾಗ, ‘ಅವರ ದರ್ಶನವೇ ಪವಿತ್ರತೀರ್ಥ’ ವೆಂದೇ ಆಗಲಿಲ್ಲವೇ?
‘ಆತ್ಮನಿಷ್ಠಾವಿರಹಿತ’ ‘ಎಲ್ಲಿ ಹೋದರೂ ರಾಟೆಯ ನೀರು’ ಯಾಕಿಲ್ಲ?
ಅದೇಕೆ ‘ನಾತ್ಮಲಾಭಾತ್ಪರೋಲಾಭಃ’ ‘ನ ದೇವಃ ಸ್ವಾತ್ಮನಃ ಪರಃ’
‘ಹೇ ಉಘಡ ಬೋಲತಾ ನಯೇ| ಮೋಡೂ ಪಾಹತೋ ಉಪಾಯೇ| ಎರವೀ ಹೇ ಪಾಹತಾ ಕಾಯೇ| ಸಾಚ ಆಹೇ||’
ಟಿಪ್ಪಣಿ: ಉಪನಿಷದ್ದಿನ ಮತ್ತು ದಾಸಬೋಧದ ಅನೇಕ ಆಧ್ಯಾತ್ಮ ಸೂತ್ರಗಳನ್ನೊಳಗೊಂಡ ಈ ಪತ್ರ ಅನುವಾದಿಸಲು ಕ್ಲಿಷ್ಟಕರವಾಗಿದೆ. ಆದರೂ ಶಕ್ತ್ಯಾನುಸಾರ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ.

home-last-sec-img