Letters

Letters 46 – Travelogue and Answers to Wordly Problems

೪೬. ನಿಸ್ಪ್ರಹರು ತಮ್ಮ ಬ್ರಹ್ಮಾನಂದಾತ್ಮಕ ಜೀವನ ಜಗತ್ತಿನ ಹಿತಕ್ಕೆ ಇದೆ ಎಂದು ಭಾವಿಸಬೇಕು.

(ಚಿ. ದಿನಕರ ಬುವಾ ರಾಮದಾಸಿ ಸಜ್ಜನಗಡ ಇವರಿಗೆ ಬರೆದ ಪತ್ರದ ಮುಂದುವರಿದ ಎರಡನೆಯ ಭಾಗ)

ನಮ್ಮೆಲ್ಲರ ಪ್ರಕೃತಿ ಚೆನ್ನಾಗಿದೆ. ನಿಮ್ಮ ಕರ್ತೃತ್ವದ ಮೇಲೆಯೇ ಅಲ್ಲಿಯ ಮುಂದಿನ ಭವಿತವ್ಯ ಇದೆ. ಈ ಪತ್ರದೊಂದಿಗೆ ಒಂದು ರೂಪಾಯಿ ಮತ್ತು ವ್ಯಾಸಪೂಜೆಯ ಮಂತ್ರಾಕ್ಷತೆ ಕಳುಹಿಸಿದ್ದೇನೆ. ಅದನ್ನು ನನ್ನ ಫೋಟೋ ಹತ್ತಿರ ಇಟ್ಟು ಫೋಟೋದ ಸಂಗಡವೇ ಒಂದು ವರ್ಷ ಪ್ರತಿನಿತ್ಯ ಅವೆರಡನ್ನೂ ಪೂಜೆ ಮಾಡಬೇಕು. ಒಂದು ವರ್ಷವಾದ ಮೇಲೆ ನಂತರ ಬಂದ ಹೊಸದನ್ನು ಅಲ್ಲಿ ಇಟ್ಟು ಮೊದಲಿನದ್ದನ್ನು ತೆಗೆಯಬೇಕು. ಇದರಿಂದ ನಿಮಗೆ ಅಲ್ಲಿ ಏನೂ ಕೊರತೆಯಾಗುವದಿಲ್ಲ.
ಇವತ್ತಿನ ಬರವಣಿಗೆಯಲ್ಲಿ ಸ್ವಲ್ಪ ತೀವ್ರತೆ ನಿಮಗೆ ಕಾಣಬಹುದು. ಆದರೆ ಶಿಸ್ತಿನ ಹೊರತು ಯಾವುದೇ ಕಾರ್ಯ ಯಶಸ್ವಿಯಾಗುವದಿಲ್ಲ.

ನೀವು ಹೊಣೆಗಾರಿಕೆ ತೆಗೆದುಕೊಂಡಿದ್ದೀರಿ. ಶ್ರೀಸಮರ್ಥ ಸ್ವಾಭಿಮಾನಿಗಳಾಗಿದ್ದೀರಿ. ನಿಮ್ಮ ಹಸ್ತದಿಂದ ಶ್ರೀಗಡದ ಮೇಲೆ ದೊಡ್ಡ ದೊಡ್ಡ ಕಾರ್ಯಗಳಾಗುವದಿದೆ. ಅದಕ್ಕಾಗಿ ನೀವು ನಿಮ್ಮ ಪಾತ್ರತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೋರಿಸುತ್ತಾ ನಡೆಯಿರಿ. ‘ಕಾರಣ ತಿಳಿಸುವೆ| ನ್ಯಾಯನಿಷ್ಠುರವಿರಬೇಕು ಮಾತು|’
ಶ್ರೀಮಾರುತಿಸ್ತೋತ್ರ ಪರೀಕ್ಷಿಸಿ ಅನಿಸಿದ ಸುಧಾರಣೆ ಮಾಡಿ ಈ ಪತ್ರದೊಂದಿಗೆ ಕಳಿಸಿದ್ದೇನೆ. ಪುನಃ ಪುಣೆಯಲ್ಲಿ ಯಾರಿಗಾದರೂ ತೋರಿಸಿ ಅವರಿಂದ ಸೂಚನೆ ಬಂದರೆ ತಿದ್ದುಪಡೆ ಮಾಡಿ ಕಳಿಸುತ್ತೇನೆ.

ಸೌ. ಸಾವಿತ್ರಿ ಮಾಡಿದ್ದು ಇಲ್ಲಿಗೆ ಕಳುಹಿಸಿಲ್ಲ. ಅವಳು ಬರೆದ ಪ್ರಸ್ಥಾವನೆ ವೀಕ್ಷಿಸಿದ್ದೇನೆ. ಅವಳ ಬರಹವನ್ನೂ ಪರೀಕ್ಷಿಸಿ ಕಳುಹಿಸುತ್ತಿದ್ದೆ. ಒಮ್ಮೆ ಸಾರ್ವಜನಿಕವಾಗಿ ಎಲ್ಲರನ್ನೂ ಸಿಗಹತ್ತಿದೆನೆಂದರೆ ನನಗೆ ಈಗಿನಂತೆ ವೇಳೆ ಸಿಗುವದಿಲ್ಲ. ಶ್ರೀರಾಮ ಮತ್ತು ಶ್ರೀಸಮರ್ಥಪಾಠದ ಪ್ರಸ್ಥಾವನೆ ಸಂಬಂಧದಲ್ಲೂ ಏನೂ ತಿಳಿಸಿಲ್ಲ.

ನೀವೆಲ್ಲರೂ ಕ್ಷೇಮದಿಂದಿದ್ದಿರಲ್ಲಾ? ಹಾಗೇನಾದರೂ ತೊಂದರೆಯಿದ್ದರೆ ತಿಳಿಸಬೇಕು. ಶ್ರೀರಾಮಪಾಠದ ಮುಖಪ್ರಷ್ಠದ ಮೇಲಿನ ಭಾಗದಲ್ಲಿ ಒಳ-ಹೊರಗೆ ಹೀಗೆ ನಾಲ್ಕು ಸ್ಥಳಗಳಲ್ಲಿ ಶ್ರೀಸಮರ್ಥವಚನಗಳನ್ನು ಇಡುವ ಬಗ್ಗೆ ಬರೆದಿದ್ದೆ. ಕೆಲವಿಷ್ಟು ಬರೆದೂ ಕಳಿಸಿದ್ದೆ ಮತ್ತು ಕೆಲವನ್ನು ಆರಿಸಿ ಹಾಕಲಿಕ್ಕೆ ತಿಳಿಸಿದ್ದೆ. ಏನಾದರೂ ಎಲ್ಲಾದರೂ ಸೂಚಿಸುವದಿದ್ದರೆ ಯಾವುದೇ ರೀತಿಯಲ್ಲಿ ಹೆದರಬಾರದು. ಇಲ್ಲೇನು ಹುಲಿ-ಕುರಿಯ ವ್ಯವಹಾರ ನಡೆಯುತ್ತಿಲ್ಲವಲ್ಲ. ಈ ವಿಷಯದಲ್ಲಿ ಸಂಕೋಚವೂ ಇರಬಾರದು. ಇಲ್ಲಿ ‘ಗುರುಶಿಷ್ಯರೊಂದೇ ಪದದಲಿ’. ದೂರದೃಷ್ಟಿಯಿಟ್ಟು ನಡೆಯಬೇಕು. ಸ್ವ-ಪರ ಹಿತದ್ದೇ ವಿಚಾರ ಇರಬೇಕು. ‘ದುಃಖ ದಾರಿದ್ರ್ಯ ಉದ್ವೇಗದಿಂದಲೇ| ಜನರೆಲ್ಲೆಡೆ ಪೀಡಿತರು||’ ಅವರು ನಿಮ್ಮಂತವರಿಂದಲೇ ಸುಖ ಹೊಂದುವರು.

ಶ್ರೀಸಮಾಧಿಗೆ ಹಚ್ಚಿದ ಗಂಧ ನನಗೆಂದು ಕಳಿಸಿರಿ. ಅಭಿಷೇಕವಾದ ಮೇಲೆ, ನಿಮ್ಮವರಲ್ಲೇ ಒಬ್ಬರು ಉಜ್ಜಿ ತೊಳೆದು, ಗಂಧವನ್ನು ಸೋಸಿ, ಅದನ್ನು ನನಗೆ ತಿಂಗಳು – ಹದಿನೈದು ದಿವಸಕ್ಕೆ ಆದಷ್ಟು ಕಳಿಸುತ್ತಿರಿ. ಅನ್ನದಾನ ವ್ಯವಸ್ಥಿತ ನಡೆಯಲಿ. ಹಣ ಕಳುಹಿಸುತ್ತೇನೆ. ಶ್ರೀಸಮರ್ಥಕೃಪೆಯಿಂದ ಎಲ್ಲವೂ ಸುಸೂತ್ರವಾಗಿ ನಡೆಯುವದು. ನೀವೆಲ್ಲರೂ ಒಮ್ಮತದಿಂದ ವರ್ತಿಸಿರಿ. ನಮ್ಮದೇ ಆಗಬೇಕೆಂಬ ಪಟ್ಟು ಹಿಡಿದು ನಡೆಸದೇ, ಎಲ್ಲರ ಅಭಿಪ್ರಾಯದಲ್ಲಿ ಯಾವುದು ಯುಕ್ತವೋ ಅದನ್ನು ದುರಭಿಮಾನ ಬಿಟ್ಟು, ನಡೆಯುವ ಧೀರೋದಾತ್ತ ನಡೆ ನಿಮ್ಮ ಅಂಗೀಭೂತವಾಗಲಿ. ಆಟ-ಕೂಟದ ವಾತಾವರಣದಲ್ಲಿ ಎಲ್ಲ ಕೆಲಸಗಳೂ ಆಗಬೇಕು. ನಿಸ್ಪ್ರಹರ ಜೀವನ ಜಗತ್ತಿನ ಕಲ್ಯಾಣಕ್ಕಾಗಿ ಇರುತ್ತದೆ. ಅವನು ವಿಶ್ವಸುಖಮೂರ್ತಿಯೇ ಇರುತ್ತಾನೆ. ನಿಸ್ಪ್ರಹರು ತಮ್ಮ ಬ್ರಹ್ಮಾನಂದಾತ್ಮಕ ಜೀವನ ಜಗತ್ತಿನ ಹಿತಕ್ಕೆ ಇದೆ ಎಂದು ಭಾವಿಸಬೇಕು.

(ಪತ್ರದ ಮೂರನೆಯ ಮತ್ತು ಕೊನೆಯ ಭಾಗ ಮುಂದುವರಿಯುವದು)

home-last-sec-img