Letters

Letters 7 – Consolatory & Advisory to Lady Devotees

೭. ‘ಜೀವಿಗಳ ಅಂತರಂಗದ ಗುಟ್ಟು ನಿನಗೆ ಪೇಳುವೆ ನಾ ಈ ಲೇಖನಿಯಲೀ’ – – ಈ ಅಭಂಗರೂಪದ ಪತ್ರಗಳಲ್ಲಿ ಸ್ವಾಮಿಗಳು ಕು. ರಾಧೆಗೆ ಜೀವ-ಬ್ರಹ್ಮ, ಭಕ್ತಿ, ಸಾಧನೆಗಳ ಗುಟ್ಟು ತಿಳಿಸಿ ಹೇಳಿದರು!
(ಇಸವಿ ಸನ ೧೯೪೩-೪೪ರ ಸುಮಾರಿಗೆ ಬರೆದ ಎರಡು ಅಭಂಗಾತ್ಮಕ ಕಾವ್ಯಗಳ ಪತ್ರ)

||ಶ್ರೀರಾಮ ಸಮರ್ಥ||

ಚಿ. ರಾಧೆಗೆ ಆಶೀರ್ವಾದ,
ನಾನು ತಿರುಗಿ ಬರುತ್ತಿರುವಾಗ ಪತ್ರ ಬರೆಯಲು ತುಂಬಾ ತುಂಬಾ ಆಗ್ರಹ ಮಾಡಿದ್ದೆ. ಪತ್ರ ಬರೆಯದಿದ್ದರೆ ನಿನ್ನ ಮನಸ್ಸಿಗೆ ನೋವಾಗಬಹುದೆಂದು ಈ ಅಭಂಗಾತ್ಮಕ ಪತ್ರ ಬರೆದಿದ್ದೇನೆ. ಕಠಿಣ ಶಬ್ಧಗಳಿಗೆ ಸಂಖ್ಯೆ ಬರೆದು, ಕೊನೆಯಲ್ಲಿ, ಆ ಸಂಖ್ಯೆಯ ಮುಂದೆ ಅರ್ಥವನ್ನೂ ಕೊಟ್ಟಿದ್ದೇನೆ. ಪತ್ರದಿಂದ ನನ್ನ ಆಶಯ ಸ್ಪಷ್ಟವಾಗುವದು.

ಪರಮಾತ್ಮನ ದಿವ್ಯ – ವಿಮಲ – ಜಗನ್ಮಾಯಾರಹಿತ – ಉತ್ಪತ್ತಿ-ನಾಶ ವಿರಹಿತ – ನಿತ್ಯನಿರತಿಶಯ ಆನಂದರೂಪಿ ಸಚ್ಚಿತ್ಸುಖದಲ್ಲಿ ಕರಗಿರುವ, ವೃತ್ತಿರೂಪ ಪ್ರಪಂಚದ ಅರಿವಿಲ್ಲದ, ಬಲು ಪಕ್ವಹೊಂದಿದ ಶಿಷ್ಯ-ಶಿಷ್ಯೆಯರನ್ನು ನೋಡುವದೊಂದೇ ಮನದ ಇಚ್ಛೆಯಾಗಿರುವ, ಅದೊಂದನ್ನೇ ಬಯಸುವ, ಮಾಯೆಯ ಬಂಧನವನ್ನು ಕಿತ್ತೆಸೆದು ಕೇವಲ ಆತ್ಮಜ್ಞಾನದ ಅತುಲ ಸಾಮ್ರಾಜ್ಯವೇ ಜಗತ್ತಿನ ತುಂಬೆಲ್ಲ ಹಬ್ಬಿರುವದನ್ನು ಕಣ್ತುಂಬಿ ನೋಡಿಯೇ ಈ ದೇಹ ಬಿಡಬೇಕೆಂದಿರುವ, ಈ ಮನಾಂತರಾಳದ ಅತಿ ಪ್ರೀತಿಯ ವಿಷಯವನ್ನು ಪರಮೇಶ್ವರನು ಪೂರ್ಣಗೊಳಿಸಲಿ!

ಆತ್ಮನಿಷ್ಠೆಯನ್ನು ಹೆಚ್ಚಿಸಿ, ಬ್ರಹ್ಮರೂಪದಲ್ಲಿರುವ ಜೀವಕ್ಕೆ ಜ್ಞಾನೋತ್ತರ ಯಾವುದೇ ರೀತಿಯ ಕಷ್ಟವಿರುವದಿಲ್ಲ … ಅವನಿಗೆಲ್ಲಿಯ ಚಿಂತೆ?

ಮೊದಲನೆಯ ಪತ್ರದಲ್ಲಿ ಸ್ವಾಮಿಗಳು ಹನ್ನೊಂದು ಶ್ಲೋಕಗಳ ಅಭಂಗಾತ್ಮಕ ಕಾವ್ಯಗಳಲ್ಲಿ ‘ಜೀವಿಗಳ ಅಂತರಂಗದ ಗುಟ್ಟು ನಿನಗೆ ಪೇಳುವೆ ನಾನೀ ಲೇಖನಿಯಲೀ’ ಎಂದು ಪ್ರಾರಂಭಿಸಿ, ನಂತರ, ಅಜ್ಞಾನದಿಂದಾಗುವ ಅನಾಹುತಗಳನ್ನು, ಜೀವಿ-ಸಂಸಾರದ ನಿಜತ್ವವನ್ನು ಮತ್ತು ಅನಂತ ಆನಂದದ ನಿವೃತ್ತಿ ಪಥವನ್ನು, ಸುಂದರ-ಸುಶ್ರಾವ್ಯ ಶ್ಲೋಕಗಳಲ್ಲಿ ಬಣ್ಣಿಸಿ, ಮೋಕ್ಷಪ್ರಪಂಚದ ರಾಜಮಾರ್ಗವನ್ನು ತೋರಿಸಿದ್ದಾರೆ.

ಚಿ.ರಾಧೆಗೆ ಬರೆದ ಇನ್ನೊಂದು ಕಾವ್ಯರೂಪಿ ಪತ್ರದಲ್ಲಿ, ‘ಪ್ರಪಂಚದ ಭಾರ ಹರಿಸು ದೇವ ನೀನು …’ ಎಂಬಿತ್ಯಾದಿ ಐದು ಶ್ಲೋಕಗಳ ಭಕ್ತಿಪ್ರದ ಪ್ರಾರ್ಥನೆಯನ್ನು ಕಳುಹಿಸಿ, ಭಕ್ತಿಮಾರ್ಗದಲ್ಲಿ ಮಾರ್ಗದರ್ಶನ ಮಾಡಿದರು.

(ಮರಾಠಿಯಲ್ಲಿರುವ ಈ ಶ್ಲೋಕಪುಂಜಗಳನ್ನು ಭಾಷಾಂತರ ಮಾಡಲು ಹಳೆಯ ಕಾಲದ ಮರಾಠಿಯಲ್ಲಿ ಪ್ರಾವೀಣ್ಯತೆಯಷ್ಟೇ ಅಲ್ಲ, ಆಧ್ಯಾತ್ಮ ವಿಷಯದ ಶಬ್ಧಗಳ ಮೇಲೆ ಬೇಕು. ಆದುದರಿಂದ, ಅಭಂಗಗಳನ್ನು ಇಲ್ಲಿ ನಮೂದಿಸಿಲ್ಲ)

home-last-sec-img