Literature

ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್…

ಸಮಂ ಹಿ ಸರ್ವಭೂತೇಶು ತಿಷ್ಠಂತಂ ಪರಮೇಶ್ವರಂ|
ವಿನಷ್ಯತ್ಸ್ವವಿನಷ್ಯಂತಂ ಯಃ ಪಶ್ಯತಿ ಸ ಪಶ್ಯತಿ||
ಸಮಂಪಶ್ಯನ್ ಹಿ ಸರ್ವತ್ರ ಸಮವಸಿ್ಥತಮೀಶ್ವರಂ|
ನ ಹಿನಸ್ತಾ್ಯತ್ಮನಾತ್ಮಾನಂ ತತೋ ಯಾತಿ ಪರಾಂಗತಿಂ||

ತಾತ್ಪರ್ಯವೇನೆಂದರೆ, ಪರಮಾತ್ಮನಲ್ಲಿ ದೃಷ್ಟಿಯಿಟ್ಟು ಜೀವಿಸುವವರು ಜಗದ್ವಿಷಯಗಳಿಂದಾಗುವ ಆತ್ಮನಾಶದಿಂದ ತಪ್ಪಿಸಿಕೊಳ್ಳುವರು. ಉಳಿದವರು ತಮ್ಮದೇ ಆತ್ಮಹಿಂಸಕರಾಗುವರು.

ವಿಷಯಸುಖ ತ್ಯಜನೆ ಪೂರ್ಣಸುಖ ಸಾಧನೆಗೆ ಆವಶ್ಯಕ. ಆದರೆ ವಿಷಯಸುಖ ಭೋಗದ ಅನೇಕ ಜನ್ಮಗಳ ಸಂಸ್ಕಾರವಿದೆ. ಹಾಗಾಗಿ ಅದು ಒಮ್ಮೆಲೇ ಸಾಧ್ಯವಾಗಲಿಕ್ಕಿಲ್ಲ. ಕ್ರಮೇಣ ಸಾಧಿಸಬೇಕು.

ಜೀವನಕ್ಕೆ ಅವಶ್ಯವಾದಷ್ಟೇ ವ್ಯವಹಾರಗಳನ್ನು ಇಟ್ಟುಕೊಂಡು- ಬದುಕಲಿಕ್ಕೊಂದು ಸಾಧನ ಬೇಕು ಎಂಬ ಭಾವನೆಯಿಂದ- ಪರಮಾರ್ಥಕ್ಕಾಗಿ ದುಡಿಯಿರಿ. ಬದುಕಿಗಾಗಿ ಆಹಾರವಲ್ಲದೇ ಆಹಾರಕ್ಕಾಗಿ ಬದುಕಲ್ಲ. ಅಂತೆಯೇ ನಮ್ಮ ವ್ಯವಹಾರವೂ ಪರಮಾರ್ಥಕ್ಕಾಗಿ! ಬರಿಯ ಜೀವನಕ್ಕಾಗಿ ಅಲ್ಲ.

ಜೀವನದಲ್ಲಿ ಸಾಧಿಸಬೇಕಾದದ್ದು ವ್ಯವಹಾರವನ್ನಲ್ಲ. ಜಗತ್ತಿನ ಸುಖವನ್ನಲ್ಲ.
ಈ ಸಾಧನೆಯಲ್ಲಿ ವರ್ಣಾಶ್ರಮಧರ್ಮಗಳು ಸಹಾಯಮಾಡುತ್ತವೆ.

ಅದರಂತೆ, ಪರಮಾತ್ಮನಲ್ಲಿ ನಿಸ್ಸೀಮ ಪ್ರೇಮರೂಪ ಭಕ್ತಿ, ಕೃಚ್ಛಚಾಂದ್ರಾಯಣಾದಿ ಪ್ರಾಯಶ್ಚಿತ್ತ ಮತ್ತು ವಿವೇಕ- ವೈರಾಗ್ಯ, ಇವು, ವಿಷಯ ಸುಖಾಪೇಕ್ಷೆಯ ಭಾವನೆಯ ಹಿಡಿತದಿಂದ ಹೊರಬರಲು ಸಾಧನೆಗಳು.

ಭಾವನೆಯಿಂದ ತೋರುವ ವಿಷಯಸುಖ ಆ ಭಾವನೆ ಮುಗಿದೊಡನೆಯೇ ಅಡಗಿಹೋಗುವದು.

ಪರಮಾತ್ಮನ ತೀವ್ರ ದಿವ್ಯಭಾವನೆಯಿಂದ ವಿಷಯಸುಖಭಾವನೆ ಮನದಿಂದ ಮರೆಯಾದಾಗ ವಿಷಯತ್ಯಾಗವು ಸುಲಭವಾಗಿ ಆಗುವದು.
ಪರಮಾತ್ಮನು ನಮಗೆ ಈ ವಿಷಯದಲ್ಲಿ ಈ ರೀತಿ ತಿಳಿ ಹೇಳಿದ್ದಾನೆ,

ಉದ್ಧರೇದಾತ್ಮನಾತ್ಮಾನಂ ನಾತ್ಮಾನವವಸಾದಯೇತ್|
ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ||

ತನ್ನನ್ನು ತಾನೇ ಕೊಂದುಕೊಳ್ಳಬಾರದು; ಉದ್ಧರಿಸಿಕೊಳ್ಳಬೇಕು! ಈ ವಿಚಾರದಲ್ಲಿ ನಮ್ಮ ಬಂಧುವೂ ನಾವೇ; ನಮ್ಮ ಶತ್ರುವೂ ನಾವೇ!

home-last-sec-img