Literature

ಧರ್ಮಮೂಲದ ಅರ್ಥ-ಕಾಮ ಈಶ್ವರಪ್ರಸಾದ!

‘ತನ್ನನ್ನು ಉದ್ಧರಿಸುವದು’ ಎಂದರೆ ವಿಷಯವಾಸನೆಯನ್ನು ಕಳಚಿಹಾಕುವದು! ಇದನ್ನು ಸಾಧಿಸಲು ಎರಡು ಆಶ್ರಮಗಳು ಉಪಯುಕ್ತವಾಗಿರುವವು. ಒಂದು ಗ್ರಹಸ್ಥಾಶ್ರಮ; ಇನ್ನೊಂದು ಸನ್ಯಾಸ.

ಭೋಗಗಳನ್ನು ಅನುಭವಿಸಿ, ಅದು ಸಂಪೂರ್ಣ ದುಃಖಕರವೆಂದೂ, ನಿರುಪಯುಕ್ತವೆಂದೂ ತಿಳಿದು ಪರಮಾತ್ಮನ ಕಡೆ ಹೊರಳಿ ಆತನನ್ನು ದೊರಕಿಸಿಕೊಳ್ಳುವದು ಗ್ರಹಸ್ಥಾಶ್ರಮ.

ಗ್ರಹಸ್ಥಾಶ್ರಮದಲ್ಲಿ ಅನುಭವದಿಂದ ಮನಸ್ಸನ್ನು ತಿದ್ದುವದು ಶಾಸ್ರ್ತದ ಉದ್ದೇಶವಿದೆಯೇ ಹೊರತು ಬರೇ ವಿಷಯಭೋಗಕ್ಕಾಗಿಯೇ ಗ್ರಹಸ್ಥಾಶ್ರಮವನ್ನು ಹೇಳಿಲ್ಲ. ವಿಷಯಗಳನ್ನು ಭೋಗಿಸಿದಾಗ ಆದ ಅವುಗಳ ದೋಷ ದರ್ಶನದಿಂದ ಮನಸ್ಸು ವಿಷಯ ತ್ಯಜಿಸವುಂತಾಗುವದೇ ಗ್ರಹಸ್ಥಾಶ್ರಮದ ಗರ್ಭಿತ ಹೇತು!

‘ಋಣತ್ರಯಮಪಾಕೃತ್ಯ ಮನೋ ಮೋಕ್ಷೇ ನಿವೇಶಯೇತ್’
ಪ್ರವರ್ತಿಧರ್ಮದ ಮುಂದಿನ ಹೆಜ್ಜೆಯೇ ನಿವೃತ್ತಿ!
‘ಧರ್ಮಾದರ್ಥಶ್ಚ ಕಾಮಶ್ಚ’

ಧರ್ಮದಿಂದ ಅರ್ಥ, ಕಾಮಗಳು ದೊರೆಯುವದೆಂದು ಶಾಸ್ತ್ರೋಕ್ತಿ ಇರುವದು. ಮತ್ತು ಧರ್ಮದಿಂದ ಅರ್ಥಕಾಮಗಳು ದೊರೆಯುವದೂ ನಿಜವೇ!
ಇದು ಧರ್ಮಮೂಲದ ಅರ್ಥ-ಕಾಮ! ಇದು ಸಂಯಮದ, ಸದ್ಬುದ್ಧಿಯ ಅರ್ಥ-ಕಾಮ! ಇದು ದೂಷಿತ ವಿಷಯಗಳ ತ್ಯಾಗದಿಂದ, ಈಶ್ವರಪ್ರಸಾದವೆಂಬ ಭಾವನೆಯಿಂದ ಸಂಸ್ಕರಿಸಿ ದೊರೆತ ಅರ್ಥ-ಕಾಮ!

ಧರ್ಮವು ಕೊಡುವ ಅರ್ಥಕಾಮಗಳು ತ್ಯಾಗದ ಅಭ್ಯಾಸ ಮಾಡಿಸಿ, ಪರಮಾತ್ಮನ ಕಡೆಗೇ ಸಾಗಿಸುವವು.
ಗ್ರಹಸ್ಥಾಶ್ರಮದಲ್ಲಿ ಸ್ವಧರ್ಮಾಚರಣೆ ಚಿತ್ತಶುದ್ಧಿಗೆ ಮೆಟ್ಟಲು. ಚಿತ್ತಶುದ್ಧಿ ವೈರಾಗ್ಯಕ್ಕೆ ಬಾಗಿಲು. ವೈರಾಗ್ಯದಿಂದಲೇ ಪರಮಾತ್ಮಪ್ರಾಪ್ತಿ!

home-last-sec-img