Literature

ಶ್ರೀರಾಮನು ಧರ್ಮಾವತಾರ

ಶ್ರೀ ವಾಲ್ಮೀಕಿಯವರು ವಿವರವಾಗಿ ವರ್ಣಿಸಿ ಕೇಳಿದ ಪ್ರಶ್ನೆಗಳ ತಾತ್ಪರ್ಯ ‘ಪರಮಾದರ್ಶ ವ್ಯಕ್ತಿತ್ವ ಈ ಜಗತ್ತಿನಲ್ಲಿ, ಈ ಕಾಲದಲ್ಲಿ ಎಲ್ಲಿ ನೋಡಸಿಗಬಹುದು?’
ಈ ಪ್ರಶ್ನೆಗೆ ನಾರದರು ಎನ್ನುತ್ತಾರೆ.

ಇಕ್ಷ್ವಾಕುವಂಶಪ್ರಭವೋ ರಾಮೋನಾಮ ಜನೈಃ ಶ್ರುತಃ|
ನಿಯತಾತ್ಮಾ ಮಹಾವೀರ್ಯೋ ದ್ಯುತಿಮಾನ್ ಧೃತಿಮಾನ್ವಶೀ||
ಯಾವಾತನಲ್ಲಿ ಈ ಎಲ್ಲ ಗುಣಗಳಿರುವವೋ ಆತನು ಇಕ್ಷ್ವಾಕು ವಂಶದಲ್ಲಿ ಜನಿಸಿರುವ ‘ರಾಮ’ ನೆಂಬ ಒಬ್ಬನೇ ಒಬ್ಬ ಇರುವನು.

ವಿಪುಲಾಂಸೋ ಮಹಾಬಾಹುಃ ಕಂಬುಗ್ರೀವೋ ಮಹಾಹನುಃ|
ಆ ಶ್ರೀರಾಮನು ವಿಶಾಲ ಹೆಗಲು, ಭುಜಗಳಿಂದ ಶೋಭಿತನಾಗಿದ್ದಾನೆ.

ಧರ್ಮಜ್ಞಃ ಸತ್ಯಸಂಧಶ್ಚ ಪ್ರಜಾನಾಂ ಚ ಹಿತೇ ರತಃ|
ಯಶಸ್ವೀ ಜ್ಞಾನಸಂಪನ್ನಃ ಶುಚಿರ್ವರ್ಯಃ ಸಮಾಧಿವಾನ್ ||
ಶ್ರೀರಾಮನು ಧರ್ಮದ ಎಲ್ಲಾ ಜ್ಞಾನವುಳ್ಳವನು, ಸತ್ಯಪ್ರತಿಜ್ಞನು, ಇವನಮಾತಿಗೆ ಎರಡಿಲ್ಲ, ವಚನಕ್ಕೆ ಹುಸಿಯಿಲ್ಲ. ಪ್ರಜೆಗಳ ಹಿತಸಾಧಿಸುವದರಲ್ಲಿ ಈತನು ಸದೈವ ದ್ಷನಾಗಿರುವನು. ಈತನ ಯಶಸ್ಸು ಎಲ್ಲೆಡೆಯಲ್ಲಿಯೂ ಹರಡಿರುವದು.
ಅಯೋಧ್ಯಾಕಾಂಡದ ಒಂದನೆಯ ಸರ್ಗದ ಏಳನೆಯ ಶ್ಲೋಕದಿಂದ ಶ್ರೀರಾಮನು ವಿಷ್ಣುವಿನ ಅವತಾರವೇ ಸರಿ ಎಂಬುದು ಮನಸ್ಸಿಗೆ ದಿಟವಾಗಿ ತೋರುವದು.

ಸ ಹಿ ದೇವೈರುದೀರ್ಣಸ್ಯ ರಾವಣಸ್ಯ ವದಾರ್ಥಿಭಿಃ|
ಅರ್ಥಿತೋ ಮಾನುಷೇ ಲೋಕೇ ಜಜ್ಞೇ ವಿಷ್ಣುಃ ಸನಾತನಃ||
ನಡೆ-ನುಡಿ, ನೋಟ, ನಗು, ಆಟ-ಪಾಟ, ಹಾಸ್ಯ-ವಿನೋದ ಮುಂತಾದ ಜೀವನದ ಪ್ರತಿಕ್ಷಣದಲ್ಲಿಯೂ ಯಾವಾತನ ವಿಷಯದಲ್ಲಿ ನಿಖಿಲದುರ್ಗುಣಗಳಿಂದ ದೂರವಾದ ದಿವ್ಯ ವಿಭೂತಿಯ ಅರಿವು ಹುಟ್ಟುವದೋ ಆತನೇ ಆರ್ಯಸಂಸ್ಕೃತಿಯ ಆದರ್ಶಪುರುಷನು.

ಯಶ್ಚ ರಾಮಂ ನ ಪಶ್ಯೇತ್ತು ಯಂ ಚ ರಾಮೋ ನಪಶ್ಯತಿ|
ನಿಂದಿತಂ ಸರ್ವಲೋಕೇಶು ಸ್ವಾತ್ಮಾಪ್ಯೇನಂ ವಿಗರ್ಹತೇ||
ಯಾವಾತನು ರಾಮನನ್ನು ನೋಡನೋ, ಯಾವನನ್ನು ರಾಮನೇ ನೋಡನೋ ಆ ಮನುಷ್ಯನು ಲೋಕನಿಂದಿತನಾಗಿ ವಾಸಿಸುವನು. ಆತನ ಮನಸ್ಸೇ ಆತನನ್ನು ನಿಂದಿಸುವದು.

home-last-sec-img