Literature

ಭರತನ ಪ್ರಶ್ನೆಗೆ, ಜಾಬಾಲಿಗಳ ವಾದಕ್ಕೆ ಶ್ರೀರಾಮನ ಸಮಾಧಾನ

ಭರತನು ಶ್ರೀರಾಮನನ್ನು ಕರೆದೊಯ್ಯಲು ಪರಿಪರಿಯಾಗಿ ಯತ್ನಿಸಿ ಕೊನೆಗೆ ಈ ರೀತಿಯಾಗಿ ಪ್ರಶ್ನಿಸುತ್ತಾನೆ. ಇದೊಂದು ಚತುರ ಪ್ರಶ್ನೆ. ತಮ್ಮ-ತಮ್ಮ ಧರ್ಮದಂತೆ ತಪ್ಪದೇ ನಡೆಯುವ ನೇಮವೂ ಅರಣ್ಯಜೀವನದಷ್ಟೇ ಕಷ್ಟಕರ! ಆದಾಗ್ಯೂ ಧರ್ಮ ಪರಿಪಾಲನೆ ಮನುಷ್ಯನು ಮಾಡಲೇಬೇಕಾದ ಕರ್ತವ್ಯ! ಹಾಗಿರುವಾಗ,

ಅಥ ಕ್ಲೇಶಜಮೇವತ್ವಂ ಧರ್ಮಂ ಚರಿತುಮಿಚ್ಛಸಿ|
ಧರ್ಮೇಣ ಚತುರೋ ವರ್ಣಾನ್ ಪಾಲಯನ್ ಕ್ಲೇಶಮಾಪ್ನುಹಿ||

‘ಪ್ರಭೋ! ಶ್ರೀರಾಮ! ಧರ್ಮದ ಪಾಲನೆಯಲ್ಲಿ ಕಷ್ಟವಾದರೇ ಒಳ್ಳೆಯದೆಂದು ನಿಮಗಿದ್ದರೆ ಅರಣ್ಯವಾಸಮಾಡಿಯೇ ಕಷ್ಟವನ್ನನುಭವಿಸಬೇಕೆಂದೇನಿಲ್ಲ. ಧರ್ಮದಂತೆ ಚಾತುರ್ವರ್ಣ್ಯದ ಪರಿಪಾಲನೆಯಲ್ಲೂ ಇಷ್ಟೇ ಕಷ್ಟವಾಗುತ್ತದೆ. ರಾಜನ ಧರ್ಮದ ಪ್ರಕಾರ ಇದನ್ನೇ ಮಾಡುವದು ಒಳಿತಾಗುವುದಿಲ್ಲವೇ?’
ಆದಗ್ಯೂ, ರಾಮನ ಅಚಲ ಮನಸ್ಸನ್ನು ತಿರುಗಿಸಲಾಗದೆ ಭರತನು ನಿರಾಶನಾದ ಮೇಲೆ, ಜಾಬಾಲಿ ಋಷಿಗಳು ತಮ್ಮ ವಾದವನ್ನು ರಾಮನ ಮುಂದಿಟ್ಟರು.
ಜಾಬಾಲಿ ಮುನಿಗಳ ಈ ನಾಸ್ತಿಕವಾದಕ್ಕೆ, ಶ್ರೀರಾಮನು ಇತ್ತ ಉತ್ತರ, ಈಗಿನ ಕಾಲಕ್ಕೆ ಅತ್ಯವಶ್ಯಕವಾದುದರಿಂದ ನೋಡೋಣ! ಮತ್ತು ಇದರಿಂದ ಕಲಿಯುವಂಥಾ ಪಾಠವನ್ನು ಕಲಿಯೋಣ!

ಭವಾನ್ ಮೇ ಪ್ರಿಯಕಾಮಾರ್ಥಂ ವಚನಂ ಯದಿಹೋಕ್ತವಾನ್|
ಅಕಾರ್ಯಂ ಕಾರ್ಯ ಸಂಕಾಶಮಪಥ್ಯಂ ಪಥ್ಯಸಂಮಿತಮ್||

‘ಜಾಬಾಲಿ ಮುನಿಗಳೇ! ನನಗೆ ಆಗುವ ಈ ವನವಾಸದ ದಃಖವನ್ನು ತಪ್ಪಿಸಿ, ಅಯೋಧ್ಯೆಯ ಸಿಂಹಾಸನದಲ್ಲಿ ಕುಳ್ಳಿರಿಸಬೇಕೆಂಬುದು, ನನ್ನ ಈ ಸುಖದ ಉದ್ದೇಶದಿಂದ ಹೇಳಿದ ಈ ಮಾತು ಅಕರ್ತವ್ಯವಾದುದನ್ನು ಕರ್ತವ್ಯವೆಂತಲೂ, ಅಹಿತವಾದುದನ್ನು ಹಿತವೆಂತಲೂ ತೋರಿಸುತ್ತಿದೆ.

ನಿರ್ಮರ್ಯಾದಸ್ತು ಪುರುಷಃ ಪಾಪಾಚಾರ ಸಮನ್ವಿತಃ|
ವೈದಿಕಧರ್ಮಬಂಧನವಿಲ್ಲದವನು ಪಾಪಾಚಾರಣೆಗೆ ಬೀಳುವನು.
ಕುಲೀನಮಕುಲೀನಂ ವಾ ವೀರಂ ಪುರುಷಮಾನಿನಂ|
ಚಾರಿತ್ರಮೇವ ವ್ಯಾಖ್ಯಾತಿ ಶುಚಿಂ ವಾ ಯದಿ ವಾಽಶುಚಿಂ||

ಸತ್ಕುಲಪ್ರಸೂತನೋ-ಇಲ್ಲವೋ, ವೀರನೋ-ಹೇಡಿಯೋ, ಯೋಗ್ಯ ತಿಳುವಳಿಕೆಯುಳ್ಳವನೋ-ಇಲ್ಲವೋ,ಶುದ್ಧನೋ-ಭ್ರಷ್ಟನೋ ಎಂಬುದನ್ನು ಅವನವನ ಆಚಾರವೇ ತಿಳಿಯಪಡಿಸುವದು!
ಜಾಬಾಲಿ ಮುನಿಗಳು ಮಂಡಿಸಿದ ಹಲತೆರದ ವಾದಕ್ಕೆ, ರಾಮನ ಸಮಾಧಾನವನ್ನು ಮುಂದೆ ನೋಡೋಣ.

home-last-sec-img