Memories

10. ಸ್ವಪ್ನದಲ್ಲಿ ಶ್ರೀ ಸ್ವಾಮಿಗಳು ನನಗೆ ಶ್ರೀರಾಮದರ್ಶನ ಮಾಡಿಸಿದರು

(ನಿರೂಪಣೆ : ಶ್ರೀಧರಭಕ್ತ ಶ್ರೀಪಾಂಡುರಂಗ ರಾಮಚಂದ್ರ ಖಾಡಿಲ್ಕರ, ಸಾಂಗಲಿ)

ನಾನು ಇಸವಿ ಸನ ೧೯೬೮ರ ರಾಮನವಮಿ ಉತ್ಸವಕ್ಕೆ ಸಹಕುಟುಂಬ ಕ್ಷೇತ್ರ ವರದಪುರಕ್ಕೆ ಹೋಗಿ ಬಂದೆ. ಆವಾಗ ಶ್ರೀ ಪ.ಪೂ. ಶ್ರೀಧರಸ್ವಾಮಿ ಮಹಾರಾಜರು ಮೌನ ಏಕಾಂತದಲ್ಲಿದ್ದರು. ಅವರ ಪ್ರತ್ಯಕ್ಷ ದರ್ಶನವಾಗುವ ಭಾಗ್ಯ ನನಗೆ ಲಭಿಸಲಿಲ್ಲ. ಆದರೆ, ಇಸವಿ ಸನ ೧೯೭೨ರಲ್ಲಿ ಸಾಂಗಲಿಯಲ್ಲಿ, ನನಗೆ ರಾತ್ರಿ ಸ್ವಪ್ನದಲ್ಲಿ ಸ್ವಾಮಿಗಳ ದರ್ಶನವಾಯಿತು. ಅದಲ್ಲದೇ, ಅವರೊಂದಿಗೆ ಸ್ವಾಮಿಗಳು ಪ್ರಭು ರಾಮಚಂದ್ರನ ದರ್ಶನವನ್ನೂ ಮಾಡಿಸಿದರು.

ಸ್ವಪ್ನದಲ್ಲಿ ನನ್ನ ಮುಂದೆ ಶ್ರೀ ಸ್ವಾಮಿಗಳು ಪ್ರತ್ಯಕ್ಷ ನಿಂತಿದ್ದರು. ನಾನು ನಮಸ್ಕಾರ ಮಾಡಿದ ಕೂಡಲೇ ಸ್ವಾಮಿಗಳು ‘ಏನು ಬೇಕು?’ ಎಂದು ಕೇಳಿದರು. ನಾನು, ‘ಶ್ರೀರಾಮಚಂದ್ರನ ದರ್ಶನ’ ಎಂದು ಹೇಳಿದೆ. ಸ್ವಾಮಿಗಳು ಅಲ್ಲಿ ಇದ್ದ ವಸ್ತ್ರದ ಪಡದೆ ಸ್ವಹಸ್ತದಿಂದ ಸರಿಸಿದ ಕೂಡಲೇ ನನಗೆ ಶ್ರೀರಾಮ, ಸೀತಾಮಾಯಿ, ಲಕ್ಷ್ಮಣ, ಭರತ, ಶತ್ರುಘ್ನ, ಶ್ರೀ ಮಾರುತಿರಾಯ, ಹೀಗೆ ಎಲ್ಲರೂ ಕಾಣಿಸಿದರು. ನಾನು ಸ್ವಾಮಿಗಳಿಗೆ, ‘ಸುಮ್ಮನೇ ನಿಂತು ಕೊಂಡಿರುವದಲ್ಲ; ಪ್ರತ್ಯಕ್ಷ ಜೀವಂತವಾಗಿ ನಡೆದಾಡುತ್ತಿರುವದನ್ನು ನೋಡಬೇಕು’, ಎಂದು ಹೇಳಿದೆ. ತಕ್ಷಣ ಎಲ್ಲರೂ ಜೀವಂತವಾಗಿರುವದು ಕಾಣುತ್ತಿರಲು, ಶ್ರೀಪ್ರಭು ರಾಮಚಂದ್ರನು ವರದಹಸ್ತವನ್ನೆತ್ತಿದನು ಮತ್ತು ನಾನು ಅವರ ಪಾದಗಳಲ್ಲಿ ನನ್ನ ಮಸ್ತಕವನ್ನು ಇಟ್ಟೆನು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img