Memories

11. ಸ್ವಾಮಿಗಳ ಮಂತ್ರಾಕ್ಷತೆಯ ಮಹಾತ್ಮೆ

(ನಿರೂಪಣೆ : ಶ್ರೀಧರಭಕ್ತೆ ಸೌ. ಮೀನಾ ಪಾಂಡುರಂಗ ಖಾಡಿಲ್ಕರ, ಸಾಂಗಲಿ)

ಕ್ಷೇತ್ರ ವರದಪುರದಿಂದ ತಂದ ಮಂತ್ರಾಕ್ಷತೆಯನ್ನು ನಾನು ಯಾವಾಗಲೂ ಶೃದ್ಧಾವಂತರಿಗೆ ಕೊಡುತ್ತಿದ್ದೆ. ಅದೇ ರೀತಿ ನನ್ನ ಗೆಳತಿ ಸೌ. ಯಮುತಾಯಿ ದೇವಧರರಿಗೂ ನಾನು ಮಂತ್ರಾಕ್ಷತೆ ಕೊಟ್ಟಿದ್ದೆ. ಅವರು ಆ ಮಂತ್ರಾಕ್ಷತೆಯ ಒಂದು ಪೊಟ್ಟಣವನ್ನು ತಮ್ಮ ಮಗನಿಗೆ ‘ಇದು ಶ್ರೀಧರ ಸ್ವಾಮಿಗಳ ಕೃಪೆ’ ಎಂದು ಹೇಳಿ ಆತನ ಪ್ರವಾಸದಲ್ಲಿ ಆತನ ಬೇಗಿನಲ್ಲಿ ಇಟ್ಟುಕೊಳ್ಳಲು ಕೊಟ್ಟಿದ್ದರು. ಎರಡು ವರ್ಷಗಳ ಮೇಲೆ ಅವರ ಮಗನಿಗೆ, ಕಲಕತ್ತಾದಿಂದ ಅಮರಾವತಿಗೆ ವರ್ಗವಾಗಲು, ಆತನು ಕಲಕತ್ತಾ ಮೇಲಿನಲ್ಲಿ ಪ್ರವಾಸ ಮಾಡುತ್ತಿದ್ದನು. ಅದೇ ಗಾಡಿಗೆ ಭೀಕರ ಅಪಘಾತವಾಯಿತು. ಆದರೆ, ಶ್ರೀ ದೇವಘರ ಸಂಪೂರ್ಣ ಸುರಕ್ಷಿತವಾಗುಳಿದರು. ಅವರು ತನ್ನ ತಾಯಿಗೆ ಬರೆದ ಪತ್ರದಲ್ಲಿ, ‘ಆಯೀ! ನನ್ನ ಬೇಗಿನಲ್ಲಿ ನೀನು ಕೊಟ್ಟ ಸ್ವಾಮಿ ಮಹಾರಾಜರ ಮಂತ್ರಾಕ್ಷತೆ ಇತ್ತೆಂದು ನಾನಿಂದು ನಿನಗೆ ಪತ್ರ ಬರೆದು ಕ್ಷೇಮ ಸಮಾಚಾರ ತಿಳಿಸುವ ಸ್ಥಿತಿಯಲ್ಲಿದ್ದೇನೆ’ ಎಂದು ಬರೆದಿದ್ದರು.
ಈಗ ಈ ಗ್ರಹಸ್ಥರು ಹಂಗೆರಿಯಲ್ಲಿದ್ದು, ಅಲ್ಲಿಗೂ ಅವರೊಂದಿಗೆ ಸ್ವಾಮಿಗಳ ಮಂತ್ರಾಕ್ಷತೆ ಕಳಿಸಿದ್ದೇನೆಂದು ಅವರ ತಾಯಿ ಹೇಳಿದರು. ಶ್ರೀ ಗುರುಮಾಯಿಯ ಮಂತ್ರಾಕ್ಷತಾರೂಪಿ ಕೃಪೆ ಹಂಗೆರಿಯಲ್ಲಷ್ಟೇ ಏಕೆ, ಸಂಪೂರ್ಣ ವಿಶ್ವದಲ್ಲೇ ಇದೆ. ನಮ್ಮಿಂದ ಕೇವಲ ಶುದ್ಧ ಶೃದ್ಧೆ ಮಾತ್ರ ಬೇಕು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img