Memories

18. ‘ಸರ್ವತ್ರ ಒಂದು ಗುರುತತ್ವವೇ ವ್ಯಾಪಿಸಿಕೊಂಡಿದೆ. ಅದನ್ನರಿತು, ತದ್ರೂಪದಲ್ಲಿ ಇರುವದೇ ನಿಜವಾದ ಗುರುಸೇವೆಯು’

(ನಿರೂಪಣೆ : ಶ್ರೀಧರಭಕ್ತ ಶ್ರೀ ನಾರಾಯಣಬುವಾ ಕರಮರಕರ)

ಸಜ್ಜನಗಡ ಶಕೆ ೨೩೧೨, ದಾಸನವಮಿ ಸನ ೧೮೯೫…

ನಾನು ಶ್ರೀಸದ್ಗುರುಮಾಯಿಯು ಸಾಧನೆ ಮಾಡುತ್ತಿದ್ದಾಗಿನ ಕಾಲದ ಬಗ್ಗೆ ಒಂದು ಪ್ರಶ್ನೆಯನ್ನು ಸ್ವಾಮಿಗಳ ಹತ್ತಿರ ಕೇಳಿದೆ, ‘ಮಹಾರಾಜ! ತಾವು ಸಾಧನೆ ಮಾಡುತ್ತಿದ್ದಾಗ, ತಮ್ಮ ದಿನಚರಿ ಹೇಗಿತ್ತು?’ ಅದಕ್ಕೆ ಸ್ವಾಮಿಗಳು ತಕ್ಷಣ ಉದ್ಗಾರಮಾಡಿದರು, ‘ಅಖಂಡ ಸ್ವರೂಪಾನುಸಂಧಾನ!’ ಸ್ವಾಮಿಗಳು ತಮ್ಮ ಸಾಧನೆಯ ಕಾಲದಲ್ಲಿ, ಸಜ್ಜನಗಡದಲ್ಲಿ, ಶ್ರೀಸಮರ್ಥರ ಸೇವೆ ಮಾಡುತ್ತಿದ್ದಾಗ, ಅದರಲ್ಲೇ ತಮ್ಮ ತದ್ರೂಪತೆಯಾಗಬೇಕೆಂದು, ದೇವಪೂಜೆಯ ನೀರಿನ ತಂಬಿಗೆ ತಿಕ್ಕಹತ್ತಿದರೆ, ತಾಸಾನುತಾಸು ತಿಕ್ಕುತ್ತಲೇ ಇರುತ್ತಿದ್ದರು. ಅದರಲ್ಲಿ ಅವರು ತಮ್ಮ ದೇಹಪ್ರಜ್ಞೆ ಮರೆತು ಬಿಡುತ್ತಿದ್ದರು. ಸ್ವಾಮಿಗಳು ತಿರುಗಿ ದೇಹಪ್ರಜ್ಞೆಗೆ ಬಂದ ಮೇಲೆ, ಜನರು ಅವರಿಗೆ, ‘ಶ್ರೀಧರಾ! ಹೀಗೆ ಒಂದೊಂದು ಕೆಲಸ, ತಾಸುನುತಾಸು ಮಾಡುತ್ತಿದ್ದರೆ ಅದೆಂತು ನಡೆಯುತ್ತದೆ?’ ಕೇಳಿದರು. ಅದಕ್ಕೆ ಸ್ವಾಮಿಯವರ ಮುಖದಿಂದ ಸಹಜವಾಗಿಯೇ ‘ಸರ್ವತ್ರ ಒಂದು ಗುರುತತ್ವವೇ ವ್ಯಾಪಿಸಿಕೊಂಡಿದೆ. ಅದನ್ನರಿತು, ತದ್ರೂಪದಲ್ಲಿ ಇರುವದೇ ನಿಜವಾದ ಗುರುಸೇವೆಯು. ಸಮರ್ಥರ ಕೃಪೆಯಿಂದ ಈ ಸಹಜತೆ ನನಗೆ ಲಭಿಸಿತು’ ಎಂದು ಉದ್ಗಾರ ಮಾಡಿದರು.

‘ಸಹಜ ಹೋಯಿಜೇ ತೇ ಭಗವಾನೇ| ಮಾನ್ಯ ಕೀಜೇ|
|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಆಷಾಢ ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img