Memories

25. ಶ್ರೀರಾಮ….ಜಪದ ಮಹಿಮೆ

(ನಿರೂಪಣೆ : ಶ್ರೀಧರಭಕ್ತ ಶ್ರೀ ನೀಲಕಂಠ ರಾಮದಾಸಿ, ಸಜ್ಜನಗಡ)

ಸಜ್ಜನಗಡ, ದಾಸನವಮಿ ಶಕೆ ೧೮೯೫
ಶ್ರೀರಾಮ ತ್ರಯೋದಶಾಕ್ಷರೀ ಮಂತ್ರದ ೧೩ ಕೋಟಿ ಜಪಗಳ ಪುರಶ್ಚರಣ ಪೂರ್ಣಮಾಡಿದ, ಅಂಬೇಜೋಗಾಯಿ ಕಡೆಯ ಒಬ್ಬ ಗ್ರಹಸ್ಥ, ಶ್ರೀ ಸ್ವಾಮಿಗಳು ಸಾಧಕಾವಸ್ಥೆಯಲ್ಲಿದ್ದಾಗ, ಸಜ್ಜನಗಡಕ್ಕೆ ಬಂದಿದ್ದರು. ಅವರು ವಯಸ್ಸಿನಲ್ಲಿ ಹೆಚ್ಚು ಕಡಿಮೆ ಅರವತ್ತು ವರ್ಷಗಳ ಹತ್ತಿರ ಇದ್ದಿರಬೇಕು. ಅವರು ವೃತ್ತಿಯಲ್ಲಿ ಕುಲಕರ್ಣಿಯಾಗಿದ್ದರು. ಹದಿಮೂರು ಕೋಟಿ ಜಪ ಪೂರ್ಣ ಮಾಡಿದ ಮೇಲೂ, ಶ್ರೀರಾಮನ ದರ್ಶನವಾಗದೇ ಇರುವದರಿಂದ ಬೇಸತ್ತು, ಶ್ರೀ ಸಮರ್ಥ ಸಮಾಧಿಯ ಮುಂದೆ ಶ್ರೀಸಮರ್ಥರಿಗೆ ಬಾಯಿಗೆ ಬಂದಂತೆ ಚುಚ್ಚು ಮಾತು ಹೇಳಹತ್ತಿದರು. ಆಗ ಸ್ವಾಮಿಗಳು ಸಮಾಧಿ ಪೂಜೆಯ ತೀರ್ಥ ವಿತರಿಸುತ್ತಿದ್ದರು. ಅವರಿಗೆ ಆ ಗುರುನಿಂದನೆಯ ಮಾತುಗಳು ಕೇಳಲಸಾಧ್ಯವಾಯಿತು. ಆಗ ಸ್ವಾಮಿಗಳು, ‘ಶ್ರೀ ಸಮರ್ಥ ವಚನ ಸುಳ್ಳಾಗಲು ಶಕ್ಯವೇ ಇಲ್ಲ. ನೀವು ಜಪ ಪೂರ್ಣ ಮಾಡಿದ್ದರೂ, ಅವುಗಳಲ್ಲಿ ಕೆಲವು ಜಪಗಳನ್ನು, ಸಂಸಾರದ ಅಡಚಣಿಯ ಪರಿಹಾರಾರ್ಥವಾಗಿ ನೀವು ಖರ್ಚು ಮಾಡಿರುವದರಿಂದ, ನಿಮಗೆ ಶ್ರೀದರ್ಶನವಾಗಲಿಲ್ಲ. ನೀವು ಇಲ್ಲೇ ಇದ್ದು, ಹದಿಮೂರು ಲಕ್ಷ ಜಪ ಮನಸ್ಸಿಟ್ಟು ಮಾಡಿದಿರೆಂದರೆ, ನಿಮಗೆ ಕೂಡ ದರ್ಶನವಾಗೇ ಆಗುತ್ತದೆ. ಅದರಂತೆ, ಅವರು ಜಪ ಮಾಡಿದ ಮೇಲೆ ಅವರಿಗೆ ಶ್ರೀರಾಮನ ದರ್ಶನವಾಯಿತು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಭಾದ್ರಪದ ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img