Memories

34. ದೇವಿಮಂದಿರದೊಳಗಿನ ನಾಗರಹಾವು ಹೊರಟು ಹೋಯಿತು

(ನಿರೂಪಣೆ : ಅನಾಮಧೇಯ ಶ್ರೀಧರಭಕ್ತ)

ಈ ಘಟನೆ ಸ್ವಾಮಿಗಳು ಸನ್ಯಾಸದೀಕ್ಷೆಯನ್ನು ತೆಗೆದುಕೊಳ್ಳುವ ಮೊದಲು, ಅಂದರೆ ಶಕೆ ೧೮೬೦ರ ಮಧ್ಯೆ ನಡೆದದ್ದು ಇರಬೇಕು. ಸಜ್ಜನಗಡದ ಮೇಲಿನ ಶ್ರೀ ಸಮರ್ಥ ಸ್ಥಾಪಿತ ಶ್ರೀ ಅಂಗ್ಲಾಯೀ ದೇವಿಯ ಮಂದಿರದಲ್ಲಿ, ಪೂಜೆ ಮಾಡಲು ಗುನಗನು (ಗುರವನು) ಹೋಗಿರುವಾಗ, ಶ್ರೀದೇವಿಯ ಮಸ್ತಕದ ಮೇಲೆ ನಾಗರಹಾವು ಕುಳಿತದ್ದು ಕಂಡಿತು. ಗುನಗನು ದೇವಿಯ ಮುಂದೆ ಬಂದ ಕೂಡಲೇ ಆ ಹಾವು ಫೂತ್ಕರಿಸುತ್ತಿತ್ತು. ಇದನ್ನು ನೋಡಿ ಆ ಗುನಗನು, ಶ್ರೀ ಸ್ವಾಮಿಗಳು ಇರುತ್ತಿದ್ದ, ಚಿರಮುರೆಯವರ ಮಠಕ್ಕೆ ಬಂದು, ನಡೆದ ವಿಷಯ ಸ್ವಾಮಿಗಳಿಗೆ ತಿಳಿಸಿದನು. ನಂತರ, ಸ್ವಾಮಿಗಳೊಂದಿಗೆ ನಾವೂ ಮಂದಿರಕ್ಕೆ ಹೋದೆವು. ಸ್ವಾಮಿಗಳು ದೇವಿಗೆ ಪ್ರಾರ್ಥನಾ ನಮಸ್ಕಾರ ಮಾಡಿ, ದೇವಿಯ ಮೂರ್ತಿಗೆ, ಅರಿಸಿನ – ಕುಂಕುಮ – ಪುಷ್ಪಾರ್ಚನೆ ಮಾಡಿದರು. ಒಂದು ಪಾತ್ರೆಯಲ್ಲಿ ಹಾಲು ತುಂಬಿ ದೇವಿಯ ಮುಂದಿಟ್ಟು ನೈವೇದ್ಯ ಮಾಡಿ, ದೇವಿಗೆ ಈ ರೀತಿ ಪ್ರಾರ್ಥನೆ ಮಾಡಿದರು, ‘ನೀನು ಸಕಲ ವಿಶ್ವದ ತಾಯಿಯಾಗಿರುವೆ, ಇವನು ಸಣ್ಣ ಹುಡುಗನು. ಅವನದೇನಾದರೂ ತಪ್ಪಾಗಿದ್ದರೆ, ಕ್ಷಮೆ ಮಾಡು. ಅವನ ಅಪರಾಧವನ್ನು ಕ್ಷಮಿಸು.’ ನಂತರ ಸ್ವಾಮಿಗಳು ಮಂದಿರದ ಬಾಗಿಲು ಮುಚ್ಚಿಕೊಂಡರು. ಸುಮಾರು ೧೦ – ೧೫ ನಿಮಿಷಗಳ ನಂತರ, ಬಾಗಿಲು ತೆರೆದು ನೋಡಿದಾಗ, ಹಾಲಿನ ಪಾತ್ರೆ ಬರಿದಾಗಿತ್ತು ಮತ್ತು ಅಲ್ಲಿಂದ ನಾಗನೂ ಕೂಡ ಅದೃಶ್ಯನಾಗಿದ್ದನು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಮಾರ್ಗಶೀರ್ಷ ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img