Memories

4. ಮಗಳಿಗೆ ಜೀವದಾನ

(ನಿರೂಪಣೆ : ಶ್ರೀಮತಿ ಚಂದ್ರಕಲಾ ಮಾಧವರಾವ ಜಾಧವ, ಸೊಲ್ಲಾಪುರ)

ಇದು ೨ ಆಗಸ್ಟ ೧೯೭೭ರಲ್ಲಿ ನಡೆದ ಸಂಗತಿ. ಆಗ ಅಧಿಕಮಾಸ ನಡೆಯುತ್ತಿತ್ತು. ನನ್ನ ಮಗಳು ಕು. ಸುಮಿತ್ರಾ ಇನ್ನೂ ಸಣ್ಣ ಶಿಶು. ಅವಳಿಗೆ ವಾಂತಿ ಭ್ರಾಂತಿ ಶುರುವಾಗಲು, ಸಂಪೂರ್ಣ ಶಕ್ತಿ ಹ್ರಾಸವಾಗಿ, ಶರೀರ ಕಪ್ಪಾಗ ಹತ್ತಿ, ನಿಸ್ತೇಜವಾಯಿತು. ಅವಳನ್ನು ಡಾಕ್ಟರ ಹತ್ತಿರ ತೆಗೆದುಕೊಂಡು ಹೋದಾಗ, ಡಾಕ್ಟರು ಇಷ್ಟು ತಡವಾಗಿ ಏಕೆ ತಂದಿರಿ ಎಂದು ಹೇಳಿ, ಸಿಟ್ಟಿನಿಂದ ನಡೆದು ಬಿಟ್ಟರು. ನಾವು ಅತಿ ಚಿಂತೆಯಿಂದ ಮಗಳ ಆಶೆಯನ್ನೇ ಬಿಡುವ ಪರಿಸ್ಥಿತಿಯಲ್ಲಿ ತಲೆಯ ಮೇಲೆ ಕೈಹೊತ್ತು ಕುಳಿತೆವು.

ಆದರೆ, ನನ್ನ ಮಗಳು ಕಾಯಿಲೆ ಬಿದ್ದ ದಿನದ ಮೊದಲ ರಾತ್ರಿ, ನನ್ನ ಮನೆಗೆಲಸ ಮಾಡುತ್ತಿದ್ದ ಹೌಸಾಬಾಯಿಯ ಸ್ವಪ್ನದಲ್ಲಿ ಒಬ್ಬ ಸ್ವಾಮಿಗಳು ಕಾಣಿಸಿಕೊಂಡರು. ಅವರ ಸೂಚನೆಯಂತೆ, ಹೌಸಾಬಾಯಿ ಒಂದು ತೆಂಗಿನಕಾಯಿ, ಕರ್ಪೂರ, ಖಡೀಸಕ್ಕರೆ ಮತ್ತು ಎಣ್ಣೆಗೆಂದು ಹತ್ತು ಪೈಸೆ ನನ್ನ ಹತ್ತಿರ ತಂದು ಕೊಟ್ಟಳು. ನಮ್ಮ ದೇವರ ಪೀಠದಲ್ಲಿದ್ದ ಶ್ರೀಧರ ಸ್ವಾಮಿಗಳ ಫೋಟೋ ನೋಡಿ ತನ್ನ ಸ್ವಪ್ನದಲ್ಲಿ ಕಾಣಿಸಿಕೊಂಡ ಸ್ವಾಮಿಗಳನ್ನು ಅವಳು ಶ್ರೀಧರ ಸ್ವಾಮಿಗಳೇ ಎಂದು ಗುರುತಿಸಿದಳು.

ನಾವು ಶ್ರೀಧರ ಸ್ವಾಮಿಗಳ ಪಟಕ್ಕೆ ಆರತಿ ಮಾಡಿ, ತೆಂಗಿನಕಾಯಿ ನೈವೇದ್ಯ ಮಾಡಿ ಪೂಜೆ ಮಾಡಿದೆವು. ಮಗಳಿಗೆ ಆರತಿ ತೋರಿಸಿ, ಪೂಜೆಯ ತೀರ್ಥ – ಪ್ರಸಾದ ಕೊಟ್ಟೆವು. ಆಶೆಯನ್ನೇ ಬಿಟ್ಟ ಸುಮಿತ್ರಾ ಆಗಲೇ ಚೇತರಿಸಿಕೊಳ್ಳಹತ್ತಿ, ಕೆಲಕಾಲದಲ್ಲಿಯೇ ಸಂಪೂರ್ಣ ಗುಣಮುಖಳಾದಳು. ಶ್ರೀ ಸದ್ಗುರು ಶ್ರೀಧರಸ್ವಾಮಿ ಮಹಾರಾಜರ ಈ ಕೃಪೆಯನ್ನು ನೆನೆಸಿಕೊಂಡಾಗಲೆಲ್ಲ ನಾನು ಈಗಲೂ ಗದ್ಗದನಾಗುತ್ತೇನೆ.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img