Memories

49. ವರಶಿಷ್ಯೆ ಸಾವಿತ್ರಕ್ಕನಿಗೆ ಜೀವದಾನ

(ನಿರೂಪಣೆ : ಅನಾಮಧೇಯ ಶ್ರೀಧರ ಭಕ್ತರಿಂದ ಸಂಗ್ರಹಿತ – ಶ್ರೀಧರ ವರಶಿಷ್ಯ ಸ. ರಾಮಸ್ವಾಮಿ ದೇವನಹಳ್ಳಿಯವರಿಂದ)

ಶಕೆ ೧೮೮೨-೮೩ …
ಸದ್ಗುರು ಭಗವಾನ ಶ್ರೀಧರ ಸ್ವಾಮಿಗಳು ಸಜ್ಜನಗಡದಲ್ಲಿ ಏಕಾಂತವಾಸ ಮಾಡುತ್ತಿದ್ದರು. ಅದೇ ಕಾಲದಲ್ಲಿ ವಾರಣಾಸಿಯಲ್ಲಿದ್ದ ಸ್ವಾಮಿಗಳ ಜ್ಯೇಷ್ಠ ಶಿಷ್ಯೆ ಸೌ. ಸಾವಿತ್ರಿ ಅಕ್ಕಾ ಭಾಗವತ, ಅಸ್ವಸ್ಥರಾಗಿ, ಜೀವದ ಆಶೆಯನ್ನು ತೊರೆಯುವ ಪರಿಸ್ಥಿತಿಯಲ್ಲಿದ್ದರು. ಹಾಗಾಗಿ, ಅವರ ಹತ್ತಿರ ವಾರಣಾಸಿಯಲ್ಲಿದ್ದ ಮಾತೋಶ್ರೀ ಕರ್ಕಿ ಗಂಗಕ್ಕನವರು, ಸಜ್ಜನಗಡದಲ್ಲಿ ಆ ಸಮಯದಲ್ಲಿ ಸ್ವಾಮಿಗಳೊಂದಿಗಿದ್ದು, ಸ್ವಾಮಿಗಳ ಕನ್ನಡದ ಪತ್ರವ್ಯವಹಾರ ಮಾಡುತ್ತಿದ್ದ ಸಜ್ಜನಗಡ ರಾಮಸ್ವಾಮಿಯವರಿಗೆ (ಶಿವಮೊಗ್ಗಾ ಮೂಲದ ಸದ್ಗುರು ಸಜ್ಜನಗಡ ರಾಮಸ್ವಾಮಿಯವರು ನಂತರ ಶ್ರೀಪಾದ ಶ್ರೀವಲ್ಲಭರ ಜನ್ಮಸ್ಥಳ ಪೀಠಾಪುರ ಆಂಧ್ರದಲ್ಲಿ, ಶ್ರೀಪಾದ ಶ್ರೀವಲ್ಲಭ ಮಹಾ ಸಂಸ್ಥಾನ ಸ್ಥಾಪಿಸಿದರು) ಕೆಳಗಿನಂತೆ ಪತ್ರ ಬರೆದಿದ್ದರು.

“ರಾಮಸ್ವಾಮಿ! ನೀನು ನನಗೊಂದು ಉಪಕಾರ ಮಾಡಿದರೆ, ಗುರುಭಕ್ತೆ ಸೌ. ಸಾವಿತ್ರಿಗೆ ನೀನೇ ಪ್ರಾಣದಾನ ಕೊಟ್ಟಂತೆ ಆಗುವದು. ಸೌ. ಸಾವಿತ್ರಿ ಅಕ್ಕನಿಗೆ ಶ್ರೀ ವಿಶ್ವನಾಥನು ಸ್ವಪ್ನದಲ್ಲಿ ಬಂದು,’ನಿನ್ನ ಸದ್ಗುರುವು ಮನಸ್ಸು ಮಾಡಿದರೆ ಮಾತ್ರ ನೀನು ಬದುಕುವೆ; ಇಲ್ಲದಿದ್ದರೆ ಇಲ್ಲ’ ಎಂದು ಹೇಳಿದರು. ಅವಳ ಪ್ರಕೃತಿ ಈಗ ತುಂಬಾ ಕೆಟ್ಟಿದೆ. ಇದನ್ನು ನೀನು ಗುರುಮಾತೆಗೆ ತಕ್ಷಣ ತಿಳಿಸಿದರೆ, ಅವರೊಬ್ಬರು ಮಾತ್ರ ಅವಳಿಗೆ ಜೀವದಾನ ಕೊಡಲು ಶಕ್ಯರಿದ್ದಾರೆ. ಅನ್ಯಥಾ ಅವಳು ಬದುಕುವ ಆಶೆ ಇಲ್ಲ’

ಈ ಪತ್ರ ಶ್ರೀ ರಾಮಸ್ವಾಮಿಯವರು, ಗುರುಮಾಯಿಗೆ ಓದಿ ತೋರಿಸಿದ ಮೇಲೆ, ಸ್ವಾಮಿಗಳು ಈ ಕೆಳಗೆ ಬರೆದಂತೆ ಸೌ. ಸಾವಿತ್ರಿಅಕ್ಕನಿಗೆ ತಿಳಿಸಿದರು.

‘ಪಾದತೀರ್ಥ ಪ್ರತಿದಿನ ಮೂರೂ ಹೊತ್ತು ಔಷಧವೆಂದೇ ಸೇವಿಸಬೇಕು. ತೀರ್ಥದಲ್ಲಿ ಸ್ವಲ್ಪ ಭಸ್ಮ ಹಾಕಿ, ಕುಡಿಯಬೇಕು; ಸ್ವಲ್ಪ ಎದೆಗೆ ಮತ್ತು ಹಣೆಗೆ ಹಚ್ಚಬೇಕು. ತೀರ್ಥ ತೆಗೆದುಕೊಳ್ಳುತ್ತಿರುವಾಗ ಉಳಿದ ಯಾವುದೇ ಔಷಧ ತೆಗೆದುಕೊಳ್ಳಬಾರದು. ಅದೇ ರೀತಿ ಯಾವುದೇ ತರದ ವಿಚಾರವನ್ನು ಮನಸ್ಸಿನಲ್ಲಿ ತರಬಾರದು. ಎಲ್ಲ ಪ್ರಕಾರದ ಆಶೆ, ಚಿಂತೆ ಬಿಟ್ಟು ಆನಂದಸ್ವರೂಪದಲ್ಲಿರಬೇಕು.

ಈ ಉಪಚಾರ ಪ್ರಾರಂಭವಾದ ಕೂಡಲೇ ಸೌ. ಸಾವಿತ್ರಿ ಅಕ್ಕಾನವರ ಪ್ರಕೃತಿ ಸುಧಾರಿಸಹತ್ತಿತು. ಅದರ ನಂತರ ೧೦-೧೧ ವರ್ಷಗಳು ಅವರು ಬದುಕುಳಿದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಆಷಾಢ, ೧೯೦೩, (ಇಸವಿ ಸನ ೧೯೮೧), ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img