Memories

56. ಮರಣಾಸನ್ನನಾದ ಬಾಲಕನಿಗೆ ಪುನರ್ಜೀವನ

(ನಿರೂಪಣೆ : ಶ್ರೀಧರಭಕ್ತ ಡಾ| ಲ. ಶಂ ಭಾವೆ, ಪುಣೆ)

ಸ್ವಾಮಿಗಳ ವಾಸ್ತವ್ಯ ಆವಾಗ ಕರಾಡದಲ್ಲಿತ್ತು. ಒಂದು ದಿನ ಸ್ವಾಮಿಗಳ ಪಾದಪೂಜೆ ಮತ್ತು ಭಿಕ್ಷೆ ಕರಾಡದವರೇ ಆದ ಗುರುಭಕ್ತ ಲಕ್ಷ್ಮಣರಾವ ದೇಶಪಾಂಡೆಯವರಲ್ಲಿ ಇತ್ತು. ಸ್ವಾಮಿಗಳ ಭಿಕ್ಷೆಗೆ ಎಲ್ಲವೂ ಸಿದ್ಧವಾಗಿರಲು, ಸ್ವಾಮಿಗಳ ಕೈಮೇಲೆ ಹಸ್ತೋದಕ ಕೊಟ್ಟಾಯಿತು. ಇನ್ನೇನು ಸ್ವಾಮಿಗಳು ತುತ್ತು ತೆಗೆದುಕೊಳ್ಳಬೇಕು, ಅಷ್ಟರಲ್ಲಿ ಒಮ್ಮೆಲೇ ತಡೆದರು. ಸ್ವಾಮಿಗಳಿಗೆ ಒಂದು ಹಿಚುಕಿದ ಕುತ್ತಿಗೆಯಿಂದ ಹೊರಬರುವ ಆರ್ತ ಮತ್ತು ಅತಿ ದುಃಖದ ಬಿಕ್ಕುವಿಕೆ ಕೇಳಿಬಂತು ಮತ್ತು ಅವರ ಹೃದಯ ಚುರಗುಟ್ಟಿತು. ಲಕ್ಷ್ಮಣರಾವರಿಗೆ ಸ್ವಾಮಿಗಳು ಸ್ಪಷ್ಟವಾಗಿ ಕೇಳಿದಾಗ ಅವರು ವಿಷಯವನ್ನೆಲ್ಲ ಹೇಳಿದರು. ಜನರಿಗೆ ತಿಳಿಯಬಾರದೆಂದು ತಮ್ಮ ಸೊಸೆಯ ಮರಣೋನ್ಮುಖ ಮಗನನ್ನು ಮನೆಯಿಂದ ದೂರವಿದ್ದ ಕತ್ತಲೆಯ ಕೋಣೆಯಲ್ಲಿ ಅವರು ಇಟ್ಟಿದ್ದರು. ಮಗನು ಪ್ರಾಣ ಬಿಡುತ್ತಿದ್ದದ್ದು ಲಕ್ಷಕ್ಕೆ ಬಂದ ಕೂಡಲೇ ಆ ಮಾತೃಹೃದಯ ಆ ದುಃಖವನ್ನು ಸಹಿಸಲಾಗಲಿಲ್ಲ ಮತ್ತು ತಡೆಯದೇ ಬಿಕ್ಕುವಿಕೆ ಸ್ಫೋಟವಾಯಿತು. ಸ್ವಾಮಿಗಳು ತಕ್ಷಣ ಭಿಕ್ಷೆಯಿಂದೆದ್ದು ಅಲ್ಲಿಗೆ ಹೋದರು ಮತ್ತು ಅವರು ತಾಯಿಯ ಕಾಲಮೇಲಿದ್ದ ಬಾಲಕನನ್ನು ಎತ್ತಿ ತೆಗೆದುಕೊಂಡು ನೀರಿನ ಹೌದಿನ ಹತ್ತಿರ ಅವನನ್ನು ತಮ್ಮ ಕಾಲಮೇಲೆ ತೆಗೆದುಕೊಂಡು ಕುಳಿತು, ‘ನನ್ನ ಮೈಮೇಲೆ ನಾನು ಸಾಕು ಎನ್ನುವವರೆಗೂ ಕೊಡದಿಂದ ನೀರನ್ನು ಸುರಿಯುತ್ತಿರಿ’, ಎಂದು ಅಪ್ಪಣೆ ಮಾಡಿ, ಧ್ಯಾನಸ್ಥರಾದರು. ಸುಮಾರು ಅರ್ಧಕ್ಕಿಂತಲೂ ಹೆಚ್ಚೇ ಆ ಹೌದು ಖಾಲಿಯಾಯಿತು. ನೂರಾರು ಕೊಡ ನೀರು ಅವರಿಬ್ಬರ ಮೈಮೇಲಿಂದ ಹರಿಯಿತು ಮತ್ತು ಅದೇನಾಶ್ಚರ್ಯ? ಆ ಬಾಲಕನು ಒಮ್ಮೆಲೇ ದೊಡ್ಡದಾಗಿ ಅಳಲಿದನು. ಆವಾಗ ಸ್ವಾಮಿಗಳು ಅವನ ಮೈಮೇಲೆ ತಮ್ಮ ಕೃಪಾಹಸ್ತವಿಟ್ಟು ಅವನಿಗೆ ತಿರುಗಿ ಆತನ ತಾಯಿಯ ಕಾಲಿಗೆ ಕೊಡಲು ಹೇಳಿದರು.

ಯಾರು ಸ್ವತಃ ನೀರಿನ ಕೊಡವನ್ನು ಸುರಿದರೋ, ಆ ಸ್ವಾಮಿಗಳ ಏಕನಿಷ್ಠ ಶಿಷ್ಯರಾದ ಗುರುಭಕ್ತ ಭಾಸ್ಕರಬುವಾ ರಾಮದಾಸಿಯವರು ನಮಗೆ ‘ಮನಾಚೇ ಶ್ಲೋಕ’ ಕಲಿಸುವಾಗ ಬಂದ ಸಂದರ್ಭದಲ್ಲಿ ಈ ಸತ್ಯಕಥೆ ಹೇಳಿದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img