Memories

7. ಸ್ವಾಮಿಗಳೊಂದಿಗಿನ ಕೆಲ ಅಲೌಕಿಕ ಘಟನೆಗಳು

(ನಿರೂಪಣೆ : ಶ್ರೀಧರಭಕ್ತೆ ಸೌ. ರಾಧಾಬಾಯಿ ರ. ಪೈ. ಬೆಂಗಳೂರು)

ಇಸವಿ ಸನ ೧೯೪೨ರ ಮಧ್ಯದಲ್ಲಿ ಶ್ರೀ ಗುರುಮಹಾರಾಜರು ಚಿಕ್ಕಮಗಳೂರಿನಲ್ಲಿ ಟಿ. ಮಂಜನಾಥ ಐಯ್ಯರ ಹತ್ತಿರ ಉಳಿದುಕೊಳ್ಳಲಿಕ್ಕೆ ಆಗಾಗ ಬರುತ್ತಿದ್ದರು. ನಾನು ಮತ್ತು ನನ್ನ ತಾಯಿ ಕೈ. ಸೌ. ಸೀತಾಬಾಯಿ ಪೈ ಹೀಗೆ ಇಬ್ಬರೂ ಶ್ರೀಗಳ ಆ ಆನಂದದ ಸಹವಾಸದಲ್ಲಿ ಕುಳಿತಿರಲು ಹೋಗುತ್ತಿದ್ದೆವು ಮತ್ತು ಆಧ್ಯಾತ್ಮಿಕ ವಿಚಾರಗಳ ಮೇಲೆ ಪ್ರಶ್ನೆ ಕೇಳಿ, ಸ್ವಾಮಿಗಳಿಂದ ಸಮಾಧಾನ ಪಡೆಯುತ್ತಿದ್ದೆವು. ಅತ್ಯಂತ ಶಾಂತ ಮತ್ತು ಪ್ರೀತಿಯಿಂದ ಶ್ರೀಗುರುಮಾಯಿ ಆಧ್ಯಾತ್ಮ ನಿರೂಪಣೆ ಮಾಡುತ್ತಿದ್ದರು. ನಾವು ಕೇವಲ ಆತ್ಮೋದ್ಧಾರಕ್ಕಾಗಿ, ಈ ಮಾನವ ಜನ್ಮ ಸಾರ್ಥಕವಾಗಲಿ ಎಂದು ಶ್ರೀಮುಖದಿಂದ ಹರಿಯುವ ಅಮೃತವಾಣಿಯ ಶ್ರವಣ ಮಾಡಲು ಹೋಗುತ್ತಿದ್ದೆವು. ಆದರೆ ಚಮತ್ಕಾರ ಅಥವಾ ಅದ್ಭುತ ಘಟನೆಗಳ ಕಡೆಗೆ ನಮ್ಮ ಲಕ್ಷವೇ ಇಲ್ಲವಾಗಿತ್ತು. ತಥಾಪಿ, ಶ್ರೀಗಳು ಸೂಚಿಸಿದಂತೆ, ಅಂತಹ ಕೆಲ ನನ್ನ ನೆನಪಿರುವ ಘಟನೆಗಳನ್ನು ಇಲ್ಲಿ ಬರೆಯುತ್ತಿದ್ದೇನೆ.
೧. ನನ್ನ ತಂದೆ ಶ್ರೀ ರಾಮಭಾವು ಭಜನೀ ಅಂದರೆ ರಾಮಚಂದ್ರ ಪೈ ರಾಮದಾಸಿಯವರು ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಮಾಡಿರುವಾಗ ಸ್ವಾಮಿಗಳು ಒಮ್ಮೆ ‘ಅಭಂಗ (ಮರಾಠಿ ಭಕ್ತಿ ಹಾಡು) ಮಾಡು’ ಎಂದು ಹೇಳಿದ್ದರು. ನನ್ನ ತಂದೆಯವರಿಗೆ ಕಾವ್ಯಸ್ಫೂರ್ತಿ ಇತ್ತು.

ಒಮ್ಮೆ ನನ್ನ ತಂದೆ ಚಿಕ್ಕಮಗಳೂರಿನಲ್ಲಿ ನನ್ನ ಮಾವನ ಮನೆಯ ಕೋಣೆಯಲ್ಲಿ ಮಲಗಿದ್ದರು. ರಾತ್ರಿ ೧೨ ಗಂಟೆ. ಎಚ್ಚರಾಯಿತು. ಎದ್ದು ಹಾಸಿಗೆಯ ಮೇಲೆ ವಿಚಾರ ಮಾಡುತ್ತಾ ಕುಳಿತಿರುವಾಗ ಅವರಿಗೆ ಸ್ವಾಮಿಗಳ ಫೋಟೋದಲ್ಲಿ ಒಂದು ದಿವ್ಯ ಪ್ರಕಾಶ ಕಂಡು ಬಂದು, ಆ ಸ್ಥಳದಿಂದ ಏಳೆಂಟು ಮೈಲು ದೂರದ ಕಾಫೀ ತೋಟದಲ್ಲಿ ಅಗೆದು ಸಿದ್ಧ ಪಡಿಸಿದ ಒಂದು ನೆಲದೊಳಗಿನ ಗುಹೆಯಲ್ಲಿ ಸಮಾಧಿಯಲ್ಲಿ ಕುಳಿತ ಸದ್ಗುರು ಶ್ರೀಧರ ಸ್ವಾಮಿಗಳ ದರ್ಶನ ಆ ಪ್ರಕಾಶದಲ್ಲಿ ಆಯಿತು. ಅದಾದ ಮೇಲೆ ತಕ್ಷಣ, ನನ್ನ ತಂದೆಯವರಿಂದ, ‘ಶ್ರೀಧರಗುರು ಸ್ವಾಮಿ ಭಗಾನ ಶ್ರೀಧರಗುರುಸ್ವಾಮಿ’ ಈ ಅಭಂಗ ಮತ್ತು ಭಜನೆ ರಚಿಸಲ್ಪಟ್ಟಿತು. ಕೆಲ ದಿನಗಳ ನಂತರ ಸ್ವಾಮಿಗಳ ಸನ್ನಿಧಾನದಲ್ಲಿ ಈ ಅಭಂಗ ಮತ್ತು ಭಜನೆ ಹೇಳಿದೊಡನೆ ಶ್ರೀಗುರುಮಾಯಿ ಮಂದಸ್ಮಿತರಾದರು. ಆ ಅಭಂಗ ಮತ್ತು ಭಜನೆ ಈ ಕೆಳಗಿನಂತಿದೆ.

ಅಭಂಗ :
ಶ್ರೀಧರ ಗುರು ಸ್ವಾಮಿ| ಭಗವಾನ| ಶ್ರೀಧರ ಗುರು ಸ್ವಾಮಿ|
ಧರ್ಮಗ್ಲಾನೀ ಜಗತಿ ಜಾಣುನಿ| ಆಲಾಸೀ ಧಾವೋನೀ|| ಭಗವಾನ … ||೧||
ರಮಾಧವಾಜ್ಞೇ ಅವತರಲಾಸೀ| ರಾಮದಾಸಸ್ವಾಮೀ|| ಭಗವಾನ … ||೨||
ಗುರುದತ್ತಾತ್ರಯಸ್ವಾಮೀ ತೂಂಚೀ| ನಿಶ್ಚಯ ವಾಟೇ ಮನೀ|| ಭಗವಾನ … ||೩||
ರೂಪ ತುಝೇ ತರಿ ದೃಶ್ಯ ಭಾಸಲೇ| ವಸಸೀ ಸದಾ ಚಿದ್ಘನೀ|| ಭಗವಾನ… ||೪||ಸ್ವಾತ್ಮಬೋಧಾಮೃತಾ ಪಾಜುನೀ| ಸುಖವೀ ಜನಾ ನಿಶಿದಿನೀ|| ಭಗವಾನ … ||೫||

ಮೀ ತೂ ಪಣಾಚ್ಯಾ ತ್ಯಾಗಾ ಸಾಠೀ| ಬೋಧಿಸಿ ಮೃದು ವಚನೀ||ಭಗವಾನ… ||೬||
ಅಂತರಿಚಾ ಮಮ ಜಾಣತಿ ಆಶಯ| ಕಾಯ ವದೂ ವದನೀ|| ಭಗವಾನ … ||೭||
ದೀನ ದಾಸ ಹಾ ಪಾರ್ಥಿಸಸೇ ತುಜ| ತಾರಿ ಕೃಪಾ ಕರುನೀ|| ಭಗವಾನ … ||೮||
ಭಜನೆ :
ಶ್ರೀಧರ ಸ್ವಾಮಿ ಜಯ ಜಯ ಜಯ| ಸದ್ಗುರು ಸ್ವಾಮಿ ಜಯ ಜಯ ಜಯ|
ಸಚ್ಚಿತ್ಸುಖಧನ ಜಯ ಜಯ ಜಯ| ಬ್ರಹ್ಮ ಸನಾತನ ಜಯ ಜಯ ಜಯ|
ಜ್ಞಾನಸ್ವರೂಪಾ ಜಯ ಜಯ ಜಯ| ಜ್ಞಾನಬೋಧಕಾ ಜಯ ಜಯ ಜಯ|
ಆನಂದಕಂದಾ ಜಯ ಜಯ ಜಯ| ಪೂರ್ಣಾನಂದಾ ಜಯ ಜಯ ಜಯ|
ಸದ್ಗುರು ಭಗವಾನ ಶ್ರೀಧರ ಸ್ವಾಮಿ ಮಹಾರಾಜಕೀ ಜಯ||
ಜಯ ಜಯ ರಘುವೀರ ಸಮರ್ಥ||

೨. ನನ್ನ ತಂದೆ – ತಾಯಿ ಸ್ವಾಮಿಗಳ ದರ್ಶನಕ್ಕಾಗಿ ಕಾಫೀ ತೋಟಕ್ಕೆ ಮೋಟರ ಗಾಡಿಯಿಂದ ಹೋಗಿ ಬರುತ್ತಿದ್ದರು. ಒಮ್ಮೆ ಒಂದು ಭಯಂಕರ ಹುಲಿ ಆ ಗಾಡಿಯ ಮುಂದಿನಿಂದ ಶಾಂತವಾಗಿ ಹಾದು ಹೋಯಿತು. ಈ ಹುಲಿ ಆ ತೋಟದಲ್ಲಿ ಪರಿವಾರ ಸಹಿತ ಇದ್ದರೂ, ಅಲ್ಲಿ ಹತ್ತಿರವೇ ಇರುತ್ತಿದ್ದ ಆಕಳು ಕರುಗಳಿಗೆ ತೊಂದರೆ ಕೊಡದೇ, ಅತ್ಯಂತ ಶಾಂತವಾಗಿ ಇರುತ್ತಿತ್ತು. ಇದು ಸ್ವಾಮಿಗಳಿಗೂ ಗೊತ್ತಿತ್ತು.

೩. ಇಸವಿ ಸನ ೧೯೫೮ರಲ್ಲಿ ಮದ್ರಾಸದಲ್ಲಿ ನಮ್ಮ ವಸತಿಯಿತ್ತು. ರಾತ್ರಿ ೧೦ ಗಂಟೆಗೆ, ಮನೆಯ ಮಾಳಿಗೆಯ ಮೇಲೆ ಕುಳಿತು ನನ್ನ ಮಂತ್ರ ಜಪ ಧ್ಯಾನ ‘ನಮಃ ಶಾಂತಾಯ ..’ ನಡೆದಿತ್ತು. ಅದೇ ಸಮಯ ಶ್ರೀಗುರುಮಾಯಿ ಕುದುರೆಗಾಡಿಯಲ್ಲಿ ಕುಳಿತು ನನ್ನ ಮನೆಯ ಮುಂದೆ ಬಂದು ಕೆಳಗಿಳಿದೊಡನೆಯೇ ನಾನು ಒಂದು ಕ್ಷಣ ಮೈಮರೆತೆ. ನಂತರ ತಕ್ಷಣ ಮಾಳಿಗೆಯಿಂದ ಕೆಳಗಿಳಿದು ಸ್ವಾಮಿಗಳನ್ನು ಬರಗೊಂಡು, ಮೇಲೆ ಕರೆದುಕೊಂಡು ಬಂದೆವು. ತದನಂತರ ಪಾದಪೂಜೆ ಮೊದಲಾದ ಕಾರ್ಯಕ್ರಮಗಳು ಅತಿ ಆನಂದದಿಂದ ಸಂಪನ್ನವಾದವು. ಅದರ ಮರುದಿನವೇ ಶ್ರೀಗುರುಮಾಯಿ ಚಾತುರ್ಮಾಸಕ್ಕೆಂದು ಕನ್ಯಾಕುಮಾರಿಗೆ ನಡೆದರು. ೪. ಇಸವಿ ಸನ ೧೯೫೯ರಲ್ಲಿ ಶ್ರೀ ಗುರು ಮಹಾರಾಜರ ಆಗಮನ ಬೆಂಗಳೂರಿಗೆ ಆಗಿದೆಯೆಂದು ತಿಳಿದುಬಂದ ಮೇಲೆ, ನಾನು ಒಬ್ಬ ಪರಿಚಿತಳ ಸಂಗಡ ಸ್ವಾಮಿಗಳ ದರ್ಶನಕ್ಕೆ ಅಲ್ಲಿಗೆ ಬಂದಾಗ, ಸ್ವಾಮಿಗಳ ದರ್ಶನಕ್ಕೆ ಪ್ರಚಂಡ ದಟ್ಟಣೆಯಿತ್ತು. ಆದುದರಿಂದ ಸ್ವಾಮಿಗಳ ದರ್ಶನ ಸಿಗುವದು ಕಷ್ಟಸಾಧ್ಯವೆಂದು ತಿಳಿಯಿತು. ನಾವು ಸ್ವಾಮಿಗಳ ದರ್ಶನ ಮಾಡಿದ ಹೊರತು ನೀರನ್ನೂ ಸೇವಿಸುವದಿಲ್ಲವೆಂದು ದೃಢ ನಿರ್ಧಾರ ಮಾಡಿ, ರಿಕ್ಷಾದಲ್ಲಿ ಕುಳಿತು ತಿರುಗುತ್ತಾ ಸ್ವಾಮಿಗಳ ವಾಸ್ತವ್ಯದ ವಿಳಾಸ ಹುಡುಕುತ್ತ ಇರುವಾಗ, ‘ಬಸವನಗುಡಿ’ಯಲ್ಲಿ ರಿಕ್ಷಾದಿಂದ ಕೆಳಗಿಳಿದು ಸ್ವಾಮಿಗಳ ಬಗ್ಗೆ ವಿಚಾರಿಸುತ್ತ ತಿರುಗುತ್ತಿದ್ದೆವು. ಅಷ್ಟರಲ್ಲಿ ಹಿಂದಿನಿಂದ ನನ್ನ ಹೆಸರು ಹಿಡಿದು ಕರೆಯುತ್ತಿರುವದು ಕೇಳಿತು. ತಿರುಗಿ ನೋಡಿದಾಗ, ನಾಲ್ಕೈದು ಪ್ರಮುಖ ವ್ಯಕ್ತಿಗಳೊಂದಿಗೆ ಶ್ರೀಸ್ವಾಮಿಗಳು ಮೋಟರ ಗಾಡಿಯಲ್ಲಿ ಕುಳಿತಿದ್ದು, ಗಾಡಿ ನಿಲ್ಲಿಸಿ, ನನ್ನನ್ನು ಕರೆಯುತ್ತಿದ್ದದ್ದು ಕಾಣಿಸಿತು. ಸ್ವಾಮಿಗಳು ನನ್ನನ್ನು ಹತ್ತಿರ ಕರೆದು ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯದಿಂದ ವಿಚಾರಿಸಿ, ತಮ್ಮ ವಾಸ್ತವ್ಯದ ವಿಳಾಸ ತಿಳಿಸಿದರು. ಆ ವೇಳೆ, ಶ್ರೀಚರಣಗಳ ದಿವ್ಯ, ಭವಭಯಹಾರಕ ಮತ್ತು ಆನಂದಕಾರಕ ಸಹವಾಸ ಐದಾರು ದಿನ ಲಭಿಸಿತು. ೫. ಆಗ ಶ್ರೀಗುರುಮಾಯಿಯ ಚರಣಗಳಿಂದ ಅನುಗ್ರಹ ತೆಗೆದುಕೊಂಡು ಕೆಲ ದಿನಗಳು ಕಳೆದಿದ್ದವು. ಒಂದು ದಿನ ಸ್ವಪ್ನದಲ್ಲಿ ಸ್ವಾಮಿಗಳು ದರ್ಶನ ಕೊಟ್ಟು ಸ್ವಹಸ್ತದಿಂದ ಪಾದುಕೆಯನ್ನು ಕೊಟ್ಟರು ಮತ್ತು ‘ಇವುಗಳ ಪೂಜೆ ನೀನು ಮಾಡುತ್ತಿರು’ ಎಂದು ಹೇಳಿದರು. ಆದರ ಮರುದಿನವೇ ನಿಜವಾಗಲೂ ಚಿಕ್ಕಮಗಳೂರಿಗೆ ಸ್ವಾಮಿಗಳ ಆಗಮನವಾಯಿತು ಮತ್ತು ನಾವು ದರ್ಶನಕ್ಕೆ ಹೋದೆವು. ಆಗ ನನ್ನ ಕಣ್ಣು ಸಹಜವಾಗಿಯೇ ಪಾದುಕೆಗಳ ಮೇಲೆ ಹೋಯಿತು. ಸ್ವಾಮಿಗಳು ತಕ್ಷಣ ಕೇಳಿದರು, ‘ಏನು ನೋಡುತ್ತಿರುವೆ? ನಿನಗೆ ಪಾದುಕೆ ಬೇಕಾಗಿದೆಯಲ್ಲವೇ?’ ನಾನು ಸ್ವಾಮಿಗಳಿಗೆ ಹಿಂದಿನ ರಾತ್ರಿಯ ಸ್ವಪ್ನ ಹೇಳಿದಕೂಡಲೇ, ಸ್ವಾಮಿಗಳು ನಕ್ಕರು ಮತ್ತು ಆಗಿಂದಾಗ ಆಚಾರಿ(ಬಡಗಿ)ಯನ್ನು ಕರೆಸಿ, ಹೊಸ ಪಾದುಕೆ ಮಾಡಿಸಿ, ಪಾದಪೂಜೆ ಎಲ್ಲ ಆದ ಮೇಲೆ, ಸ್ವಹಸ್ತದಿಂದ ಅವನ್ನು ನನಗೆ ಕೊಟ್ಟರು. ಅವೇ ಪಾದುಕೆಗಳು, ಸ್ವಾಮಿಗಳ ಕೃಪೆಯಿಂದ ಇಂದೂ ನನ್ನ ನಿತ್ಯ ಪೂಜೆಯಲ್ಲಿ ಇವೆ.

ಸದ್ಗುರು ಚರಿತೆಯು ಹೀಗಿದೆ ಅನಂತ| ಅದರ ಸಮಸ್ತವನು ಬಲ್ಲವರು ಯಾರು| ಬಣ್ಣಿಸಿದಷ್ಟು ಹೊಸದು ಈ ಚರಿತ್ರೆ| ಸೆಳೆವುದಿದು ಮನವ ಪ್ರೇಮಭಾವದಲಿ|

ಸ್ವಾಮಿಗಳು, ಸಮರ್ಥಪಾಠದಲ್ಲಿ ಮಾಡಿದ ಈ ಸದ್ಗುರು ವರ್ಣನೆ ಅಕ್ಷರಶಃ ನಿಜವಾಗಿದೆ. ಹೃದಯಸ್ಥ ಗುರುಮಾಯಿ ಸೂಚಿಸಿದಂತೆಯೇ ನಾನು ಘಟನೆಗಳನ್ನು ಸಂಕ್ಷಿಪ್ತರೂಪದಲ್ಲಿ ಕಳಿಸುತ್ತಿದ್ದೇನೆ.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img