Memories

8. ‘ಕೈಹಿಡಿದು ನಡೆಸುತಿಹರೆನ್ನನು ….’

(ನಿರೂಪಣೆ : ಶ್ರೀಧರಭಕ್ತ ಶ್ರೀ ಕಿಸನರಾವ ಚಿಂಚೋಳೀಕರ, ಹೈದರಾಬಾದ)

ಶ್ರೀದತ್ತ – ಶ್ರೀಧರ ಜಯಂತಿಯ ಉತ್ಸವ ಹತ್ತಿರ ಬರುತ್ತಿತ್ತು. ಆ ವೇಳೆ ನನಗೆ ಮತ್ತು ಇನ್ನೂ ಮೂರು ಜನ ಭಕ್ತರಿಗೆ ಸ್ವಪ್ನ ದೃಷ್ಟಾಂತವಾಗಿ ಉಪಾಸನೆ ನಡೆಸಲು ಅಪ್ಪಣೆಯಾಯಿತು. ಅದರಲ್ಲಿ ನನಗೆ, ‘ನಾರಾಯಣ ಮಹಾರಾಜರ ಮಠಕ್ಕೆ ಹೋಗಿ ವಿಠ್ಠಲಬುವಾರನ್ನು ಭೆಟ್ಟಿಯಾಗಿ ದಂಡ ಮತ್ತು ಭಿಕ್ಷಾಪಾತ್ರೆ ತೆಗೆದುಕೋ’, ಎಂದು ಆದ ಆದೇಶದಂತೆ, ನಾನು ಮಠಕ್ಕೆ ಹೋದೆ ಮತ್ತು ದಂಡ ಮತ್ತು ಭಿಕ್ಷಾಪಾತ್ರೆಯನ್ನು ಕೇಳಿಕೊಂಡೆ. ಆಗ ಅವರು, ತಮಗೂ ಅದೇ ರೀತಿ ಸ್ಪಪ್ನ ಬಿದ್ದ ವಿಷಯ ಹೇಳಿ, ದಂಡ ಮತ್ತು ಭಿಕ್ಷಾಪಾತ್ರೆ ನನಗೆ ಕೊಟ್ಟು, ‘ಉತ್ಸವ ಮುಗಿದ ಮೇಲೆ ಅವುಗಳನ್ನು ತಿರುಗಿ ಕೊಡಿ’, ಎಂದು ಹೇಳಿದರು. ಅದೇ ರೀತಿ ಸೇವೆ ಇಂದಿನವರೆಗೂ ನಡೆದಿದೆ.

ಮಂಗಳವಾರ ದಿ. ೩|೧೨|೧೯೭೪ರಂದು ಬೆಳಿಗ್ಗೆ ಐದು ಗಂಟೆ ಸುಮಾರಿಗೆ, ಸ್ವಾಮಿಗಳು ಮತ್ತೆ ಸ್ವಪ್ನದಲ್ಲಿ ಕಾಣಿಸಿಕೊಂಡರು. ಆಗ ದೇವಿಯ ಮುಂದೆ ಕುಳಿತಿದ್ದ ಸ್ವಾಮಿಗಳು ನನಗೆ, ‘ಇನ್ನೂ ಭಿಕ್ಷಾಪಾತ್ರೆಯನ್ನೇಕೆ ಕೈಯಲ್ಲಿ ತೆಗೆದುಕೊಂಡಿಲ್ಲ? ಮನೆಗೆ ತಂದೇಕೆ ಹಾಗೇ ಇಟ್ಟಿದ್ದೀಯಾ?’ ಎಂದು ಕೇಳಿದರು. ನಾನು ಎಚ್ಚತ್ತೆ. ನಮ್ಮ ಮಂಡಳದ ಉತ್ಸವ ಸಂಪೂರ್ಣವಾಗಿ ಭಿಕ್ಷೆಯಿಂದಲೇ ನಡೆಯುತ್ತದೆ. ಏಕೆಂದರೆ ಸ್ವಾಮಿಯವರ ಇಚ್ಛೆಯೇ ಅದು. ಭಿಕ್ಷೆ ಕೇಳುವಾಗ ಸ್ವಾಮಿಗಳು ನಮ್ಮ ಬೆನ್ನ ಹಿಂದೆ ಇದ್ದಾರೆ ಎಂದು ಅನಿಸುತ್ತದೆ ಮತ್ತು ನನ್ನ ಮನಸ್ಸಿಗೆ ಗುರುಸೇವೆ ಮಾಡಿದ ಸಮಾಧಾನ ಸಿಗುತ್ತಿರುತ್ತದೆ.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img